Call Us Now: 08272 221717

ರೋಟರಿ ಟೆಂಪಲ್‍ಟೌನ್‍ನಿಂದ ಯೋಗ ದಿನಾಚರಣೆ

June 22, 2020


ಮೂಡುಬಿದಿರೆ: ರೋಟರಿ ಕ್ಲಬ್ ಟೆಂಪಲ್‍ಟೌನ್ ವತಿಯಿಂದ ವಿಶ್ವ ಯೋಗ ದಿನಾಚರಣೆಯು ಟೆಂಪಲ್‍ಟೌನ್ ಪಾರ್ಕ್ ಸಭಾಭವನದಲ್ಲಿ ಭಾನುವಾರ ನಡೆಯಿತು.


ನಿಯೋಜಿತ ರೋಟರಿ ಜಿಲ್ಲಾ ಉಪರಾಜ್ಯಪಾಲ ಡಾ.ಯತಿಕುಮಾರ್ ಸ್ವಾಮಿಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಧನಾತ್ಮಕ ಆರೋಗ್ಯದ ಕುರಿತು ಮಾಹಿತಿ ನೀಡಿ ಯೋಗದ ಮಹತ್ವವನ್ನು ವಿವರಿಸಿದರು.

ರೋಟರಿ ಕ್ಲಬ್ ಟೆಂಪಲ್‍ಟೌನ್ ಅಧ್ಯಕ್ಷ ಡಾ.ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ.ಎಸ್., ನಿಯೋಜಿತ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪೂರ್ಣಚಂದ್ರ ಜೈನ್, ಪತಂಜಲಿ ಯೋಗ ಸಮಿತಿಯ ಶಿಕ್ಷಕಿ ಸವಿತಾ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಡಾ.ಮಹಾವೀರ ಜೈನ್ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಹರೀಶ್ ಎಂ. ಕೆ. ವಂದಿಸಿದರು. ಬಳಿಕ ಪತಂಜಲಿ ಯೋಗ ಸಮಿತಿಯ ವತಿಯಿಂದ ಯೋಗ ತರಬೇತಿ ನಡೆಯಿತು.