Call Us Now: 08272 221717

ಬಪ್ಪನಾಡು ಕ್ಷೇತ್ರಕ್ಕೆ ಒಂದು ಅಟ್ಟಿ ಮಲ್ಲಿಗೆ: ಡಿಕೆಶಿಗೋಸ್ಕರ ಅಭಯಚಂದ್ರ ಜೈನ್ ಹರಕೆ

August 10, 2020

ಮೂಲ್ಕಿ: ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರ ಪರವಾಗಿ ದಿನನಿತ್ಯ(ವರ್ಷದ 365 ದಿನವೂ)ಸೇವೆಯಾಗಿ ಒಂದು ಅಟ್ಟಿ ಮಲ್ಲಿಗೆ ಹೂವನ್ನು ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಗೆ ಮಾಜಿ ಸಚಿವ ಮ ಅಭಯಚಂದ್ರ ಜೈನ್ ಅವರು ಅರ್ಪಿಸಿದರು.

ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರು, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಯೋಗಿಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ಮಂಜುನಾಥ್ ಕಂಬಾರ್, ಆಯುಷ್ ಜೈನ್, ಮಾಜಿ ಸದಸ್ಯರಾದ ಅಶೋಕ್ ಪೂಜಾರ್ ಮೂಲ್ಕಿ ಬ್ಲಾಕ್ ಸಾಮಾಜಿಕ ಜಾಲತಾಣ ಸಂಚಾರಕರಾದ ರಕ್ಷಿತ್ ಪೂಜಾರಿ, ಹರೀಶ್ ಕೊಳಚಿಕಂಬಳ ಉಪಸ್ಥಿತರಿದ್ದರು.