Call Us Now: 08272 221717

ಮೂಡುಬಿದಿರೆ: ಕಾಷ್ಠಶಿಲ್ಪಿ ಅಚ್ಯುತ ಆಚಾರ್ಯ ನಿಧನ

July 29, 2020

ಮೂಡುಬಿದಿರೆ : ಕೊಡ್ಯಡ್ಕ ಬಂಕಿಮಜಲು ನಿವಾಸಿ, ಕಾಷ್ಠಶಿಲ್ಪಿ ಅಚ್ಯುತ ಆಚಾರ್ಯ (98) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮುಂಬಯಿಯ ಖ್ಯಾತ ರಂಗನಟ, ವಿನ್ಯಾಸಕಾರ ಅಶೋಕ ಆಚಾರ್ಯ ಕೊಡ್ಯಡ್ಕ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಖ್ಯಾತ ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯರ ಜೊತೆಗೂಡಿ ಹಲವಾರು ದೇವಾಲಯಗಳ ರಥಗಳನ್ನು ನಿರ್ಮಿಸಿದ್ದರು. ಮರದ ಹೆಬ್ಬಾಗಿಲುಗಳು, ಕರಾವಳಿಯ ಗುತ್ತುಮನೆಗಳಿಗೆ ಸಂಬAಧಿಸಿದ ದೈವಗಳ ಮಂಚಗಳ ರಚನೆಯಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಕೃಷಿ ಉಪಕರಣಗಳಾದ ಮರದ ನೇಗಿಲು, ನೊಗ, ಕಲಸಿಗೆ ಮತ್ತಿತರ ಮರದ ಸಾಧನಗಳನ್ನು ರಚಿಸಿದ್ದರು. ಅವರು ರಚಿಸಿದ ಸಾಂಪ್ರದಾಯಿಕ ಮರದ ಪರಿಕರಗಳು ಮುಂಬೈಯಲ್ಲಿ ಪ್ರದರ್ಶನದಲ್ಲಿದೆ.