Call Us Now: 08272 221717

ಕಲ್ಲಬೆಟ್ಟುವಿನ ನೂಯಿಯಲ್ಲಿ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

June 14,2020

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು ಇದರ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಶನಿವಾರ ಕಲ್ಲಬೆಟ್ಟು ಗ್ರಾಮ ನೂಯಿಯಲ್ಲಿ ನಡೆಯಿತು.

ಉಡುಪಿ ಪ್ರಾದೇಶಿಕ ಬಿ.ಹೆಚ್.ಸಿ ಕೇಂದ್ರದ ಸಮನ್ವಯಾಧಿಕಾರಿ ಅಶೋಕ್ ಅವರು ಯಾಂತ್ರೀಕೃತ ಭತ್ತ ನಾಟಿಯನ್ನು ಮಾಡುವ ವಿಧಾನನಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಭತ್ತದ ಕೃಷಿಯನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಆಹಾರದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯುವಕರು ಹಡೀಲು ಬಿದ್ದಿರುವ ಭೂಮಿಗಳನ್ನು ಆರಿಸಿ ಅಲ್ಲಿ ಭತ್ತದ ಕೃಷಿಯನ್ನು ಮಾಡುವ ಮೂಲಕ ತಮ್ಮನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಹಾಗೂ ಯಾಂತ್ರೀಕೃತವಾಗಿ ಭತ್ತ ನಾಟಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
ಎಸ್‌ಕೆಡಿಆರ್‌ಡಿಪಿಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಅವರು ಕೊರೋನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ಗಳನ್ನು ಬಳಸುವಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಮಾಸ್ಕ್ಗಳನ್ನು ವಿತರಿಸಿದರು.
ಎರವಲು ಭೂಮಿಯಲ್ಲಿ ಭತ್ತದ ಕೃಷಿ ನಡೆಸುತ್ತಿರುವ ಲಿಂಗಪ್ಪ ಗೌಡ, ಯೋಜನೆಯ ವಲಯಾಧ್ಯಕ್ಷ ಸತೀಶ್ ಕೋಟ್ಯಾನ್, ಕಲ್ಲಬೆಟ್ಟು ಒಕ್ಕೂಟದ ನಿಯೋಜಿತ ಅಧ್ಯಕ್ಷ ಶಶಿಕಿರಣ್, ಬಂಟ್ವಾಳ ತಾಲೂಕು ಬಿ.ಹೆಚ್.ಸಿಯ ಪ್ರಬಂಧಕ ಸಂದೇಶ್, ಅಜೆಕಾರು ತಾಲೂಕಿನ ಕೃಷಿ ಮೇಲ್ವೀಚಾರಕಿ ಶೋಭಾ ಉಪಸ್ಥಿತರಿದ್ದರು.
ವಲಯ ಮೇಲ್ವೀಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು