Call Us Now: 08272 221717

ಆಳ್ವಾಸ್‍ನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿಭಾಗಗಳಿಗೆ ಸನ್ಮಾನ

October 12, 2020

ಮೂಡುಬಿದಿರೆ: 2019-20ನೇ ಸಾಲಿನಲ್ಲಿ ಶೈಕ್ಷಣಿಕ, ಶೈಕ್ಷಣಿಕೇತರ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಭಾಗಗಳನ್ನು ಆಳ್ವಾಸ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶದಿಂದ ಗುರುತಿಸಿ ಸನ್ಮಾನಿಸಲಾಯಿತು.

ಕಾಲೇಜಿನ 34 ಪದವಿ ಹಾಗೂ 17 ಸ್ನಾತಕೋತ್ತರ ಪದವಿಗಳಲ್ಲಿ 8 ಅತ್ಯುತ್ತಮ ವಿಭಾಗಗಳನ್ನು 2019-20ರ ಶೈಕ್ಷಣಿಕ ವರ್ಷದ ಅತ್ಯುತ್ತಮ ವಿಭಾಗಗಳಾಗಿ ಸನ್ಮಾನಿಸಲಾಯಿತು.
ಪದವಿ ವಿಭಾಗದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಆಪ್ಲೀಕೇಶನ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಸ್ನಾತಕೋತ್ತರ ವಿಭಾಗದಲ್ಲಿ ಡಿಪಾರ್ಟ್‍ಮೆಂಟ್ ಆಫ್ ಬಯೋಟೆಕ್ನಾಲಜಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪದವಿ ವಿಜ್ಞಾನ ವಿಭಾಗದಲ್ಲಿ ಎಫ್‍ಎನ್‍ಡಿ, ವಾಣಿಜ್ಯ ವಿಭಾಗದಲ್ಲಿ ಡಿಪಾರ್ಟ್‍ಮೆಂಟ್ ಆಫ್ ಕಾಮಾರ್ಸ್, ಡಿಪಾರ್ಟ್‍ಮೆಂಟ್ ಆಫ್ ಲ್ಯಾಂಗ್ವೇಜಸ್‍ನಲ್ಲಿ ಇಂಗ್ಲೀಷ್ ವಿಭಾಗ, ಕಲಾ ವಿಭಾಗದಲ್ಲಿ ಡಿಪಾರ್ಟ್‍ಮೆಂಟ್ ಆಫ್ ಸೋಶ್ಯಿಯಲ್ ವಕ್ರ್ಸ್ ಉತ್ತಮ ವಿಭಾಗಗಳೆಂದು ಗುರುತಿಸಿಕೊಂಡರೆ, ಸ್ನಾತಕೋತ್ತರ ಪದವಿಯ ಸೈನ್ಸ್ ವಿಭಾಗದಲ್ಲಿ ಎಫ್.ಎಸ್.ಎನ್, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪಿ.ಜಿ ಡಿಪಾರ್ಟ್‍ಮೆಂಟ್ ಆಫ್ ಸೋಶ್ಯಿಯಲ್ ವಕ್ರ್ಸ್ ಉತ್ತಮ ವಿಭಾಗಗಳೆಂಬ ಪ್ರಶಸ್ತಿ ಪಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ‘ಮಾನ್ಯತೆ ನಂತರದ ಹಂತದಲ್ಲಿ ಕಾಲೇಜಿನ ಐಕ್ಯೂಎಸಿ ತಂಡ ಗುಣಮಟ್ಟದ ವರ್ಧನೆಗೆ ಉತ್ತಮ ಉಪಕ್ರಮವನ್ನು ತೆಗೆದುಕೊಂಡಿರುವುದು ಶ್ಲಾಘನೀಯ. ಪ್ರತಿ ವಿಭಾಗಗಳಿಂದ ಮುಂಬರುವ ದಿನಗಳಲ್ಲಿ ಸಮರ್ಪಿತ ಕಾರ್ಯದ ಮೂಲಕ ನ್ಯಾಕ್‍ನ ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತಾಗಬೇಕು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಯೋಜಕ ಡಾ.ರಾಜೇಶ್ ಉಪಸ್ಥಿತರಿದ್ದರು.
ಆಂತರಿಕ ಗುಣಮಟ್ಟ ಭರವಸೆಯ ಕೋಶದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯೆ ಡಾ ಶ್ರುತಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಹಾಯಕ ಪ್ರಾದ್ಯಾಪಕಿ ನೌಸಿನ್ ಭಾನು ಕಾರ್ಯಕ್ರಮ ನಿರ್ವಹಿಸಿದರು.