Call Us Now: 08272 221717

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ-ಟೊಯೊಟಾ ಕಿರ್ಲೋಸ್ಕರ್ ಕಂಪೆನಿಯ ನಡುವೆ ಒಪ್ಪಂದ

September 10, 2020

ಮೂಡುಬಿದಿರೆ: ಪ್ರಸ್ತುತ ಔದ್ಯೋಗಿಕ ಕ್ಷೇತ್ರವು ನುರಿತ ಹಾಗೂ ಕುಶಲ ತಂತ್ರಜ್ಞರ ಕೊರತೆಯನ್ನೆದುರಿಸುತ್ತಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಎಷ್ಟೇ ತರಬೇತಿ ಪಡೆದು ಬಂದಿದ್ದರೂ ಅವರನ್ನು ಔದ್ಯೋಗಿಕ ಕ್ಷೇತ್ರದ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಪಡಿಸುವುದು ಅಗತ್ಯ. ಈ ಹಿನ್ನಲೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಮ್) ಬೆಂಗಳೂರು ಹಾಗೂ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಹೊಸದೊಂದು ಒಡಂಬಡಿಕೆಗೆ ಸಹಿ ಹಾಕಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟೊಯೊಟಾ ಕಂಪನಿಯ ಮೇಲ್ಪಂಕ್ತಿಯ ಅಭ್ಯಾಸಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವರ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣ ರಂಗ ಮತ್ತು ಔದ್ಯೋಗಿಕ ರಂಗಗಳ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವುದು ಈ ಒಡಂಬಡಿಕೆಯ ಮುಖ್ಯಉದ್ದೇಶ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ತರಬೇತಿ ವಿಭಾಗವಾದ ಟೊಯೊಟಾ ಲರ್ನಿಂಗ್ ಆ್ಯಂಡ್ ಡೆವಲಪ್‍ಮೆಂಟ್ ಇಂಡಿಯಾ ಈ ಒಪ್ಪಂದದ ಉದ್ದೇಶವನ್ನು ಪೂರೈಸಲು ಸಹಕರಿಸಲಿದೆ. ವಿಶೇಷವಾಗಿ ಮ್ಯಾಕ್ಯಾನಿಕಲ್ ಇಂಜಿನಿಯರಿಂಗ್, ಎಂಬಿಎ ಹಾಗೂ ಸಮಾಜಕಾರ್ಯ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಒಡಂಬಡಿಕೆಯ ಪ್ರಯೋಜನ ಪಡೆಯಬಹುದಾಗಿದೆ. ಸೆಮಿಸ್ಟರ್ ಪ್ರಕಾರ ಈ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದ್ದು, ಅದರಂತೆ ಮೂರು ವರ್ಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿದಾರರು ಜಪಾನ್- ಏಷ್ಯಾ ಪೆಸಿಫಿಕ್ ಗ್ಲೋಬಲ್ ಪ್ರೊಡಕ್ಷನ್‍ನಟೊಯೊಟಾ ಮೋಟರ್‍ಕಾರ್ಪೋರೇಶನ್‍ನಿಂದ ಪ್ರಮಾಣೀಕೃತರಾಗಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ 300 ಅಧಿಕ ನುರಿತ ಕ್ಷೇತ್ರ ಪರಿಣತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ತರಬೇತಿಯ ವಿಷಯಗಳು:
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಲೀನ್ ಮ್ಯಾನುಫ್ಯಾಕ್ಚರಿಂಗ್ ಪ್ರಿನ್ಸಿಪಲ್ಸ್, ಅಟೊಮೊಬೈಲ್‍ಟೆಕ್ನಾಲಜಿ, ಇಂಡಸ್ಟ್ರಿಯಲ್ ಸೇಫ್ಟಿ, ಎನ್‍ವಿರಾನ್‍ಮೆಂಟ್ ಮ್ಯಾನೇಜ್‍ಮೆಂಟ್ ಸಿಸ್ಟಮ್, ಟೋಟಲ್‍ಕ್ವಾಲಿಟಯ ಮ್ಯಾನೇಜ್‍ಮೆಂಟ್, ಸಪ್ಲೈಚೈನ್ ಮ್ಯಾನೇಜ್‍ಮೆಂಟ್, ಅಟೊಮೊಬೈಲ್ ವೆಲ್ಡಿಂಗ್, ಕಾರ್ ಪೀಂಟಿಂಗ್, ಮೆಕಾಟ್ರೊನಿಕ್ಸ್, ಅಟೋಮೇಶನ್ ಆ್ಯಂಡ್‍ರೊಬೋಟಿಕ್ಸ್, ಪಿಎಲ್‍ಸಿ ಪ್ರೋಗ್ರಾಮಿಂಗ್, ನ್ಯುಮಾಟಿಕ್ಸ್, ಹೈಡ್ರಾಲಿಕ್ಸ್, ಎಕ್ಸ್‍ಇವಿ ಟೆಕ್ನಾಲಜಿ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.

ಎಂಬಿಎ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪ್ರಿನ್ಸಿಪಲ್ಸ್‍ಆಫ್ ಮ್ಯಾನೇಜ್‍ಮೆಂಟ್, ಸ್ಟ್ರಾಟಜಿಕ್ ಹ್ಯೂಮನ್‍ರಿಸೋರ್ಸ್ ಮ್ಯಾನೇಜ್‍ಮೆಂಟ್, ಆರ್ಗನೈಸೇಶನಲ್ ಬಿಹೇವಿಯರ್, ರಿಕ್ರುಟ್‍ಮೆಂಟ್‍ಆ್ಯಂಡ್ ಸೆಲೆಕ್ಷನ್, ಎಚ್‍ಆರ್‍ಅನಾಲಿಟಿಕ್ಸ್, ಕಂಪನಸೇಶನ್‍ಆ್ಯಂಡ್ ಬೆಂಚ್‍ಮಾರ್ಕಿಂಗ್, ಎಂಪ್ಲಾಯೀ ಎಂಗೇಜ್‍ಮೆಂಟ್, ರಿವಾರ್ಡ್‍ಆ್ಯಡ್‍ರಿಕಗ್ನಿಶನ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡುವ ಯೋಜನೆಯಿದೆ.
ವಿದ್ಯಾರ್ಥಿಳನ್ನು ಕುಶಲಗೊಳಿಸುವುದರ ಜೊತೆಗೆ ಉದ್ಯೋಗಕ್ಷೇತ್ರಕ್ಕೆ ಸಂಪೂರ್ಣ ಸಿದ್ಧಪಡಿಸುವ ಒಪ್ಪಂದಇದಾಗಿದ್ದು, ಆಡಳಿತ, ಮಾರ್ಗದರ್ಶನ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿ ಕನಿಷ್ಠಶುಲ್ಕವನ್ನು ನಿಗದಿಪಡಿಸಲಾಗಿದೆ. ಮ್ಯಾಕ್ಯಾನಿಕಲ್‍ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ದ್ವಿತಿಯ ವರ್ಷದಿಂದ ಹಾಗೂ ಎಂಬಿಎ, ಸ್ನಾತಕೋತ್ತರ ಸಮಾಜಸೇವೆ ವಿದ್ಯಾರ್ಥಿಗಳಿಗೆ ಅವರ ಪ್ರಥಮ ಸೆಮೆಸ್ಟರ್‍ನಿಂದ ಈ ತರಬೇತಿಗಳು ಆರಂಭವಾಗಲಿವೆ. ಇದರಲ್ಲಿ %90 ಪ್ರಾಯೋಗಿಕ ತರಗತಿಗಳು (ಟೊಯೊಟಾಕೌಶಲ್ಯ ಅಭ್ಯಾಸಗಳು) ಹಾಗೂ 10% ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. 180 ಗಂಟೆಗಳ ಪಠ್ಯಕ್ರಮವನ್ನು ರೂಪಿಸಲಾಗಿದ್ದು, ಇದರಲ್ಲಿ 110 ಗಂಟೆಗಳನ್ನು ಟೊಯೊಟಾ ಕಿರ್ಲೋಸ್ಕರ್‍ಕಂಪನಿಯ ಬೆಂಗಳೂರಿನ ಕ್ಯಾಂಪಸ್‍ನಲ್ಲಿ ಹಾಗೂ 70 ಗಂಟೆಗಳನ್ನು ಕಾಲೇಜ್‍ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಕಳೆಯಲಿದ್ದಾರೆ ಎಂದು ಡಾ.ಎಂ ಮೋಹನ ಆಳ್ವ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಯರಿಂಗ್ ಕಾಲೇಜಿನ ಡಾ ಪೀಟರ್ ಫೆರ್ನಾಂಡೀಸ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ, ಆಳ್ವಾಸ್ ಸಂಸ್ಥೆಯ ತರಬೇತಿ ಹಾಗೂ ಉದ್ಯೋಗ ವಿಭಾಗ ಅಧಿಕಾರಿ ಸುಶಾಂತ್ ಅನಿಲ್ ಲೋಬೋ, ಉಪನ್ಯಾಸಕರಾದ ಕುಮಾರಸ್ವಾಮಿ ಎಂ.ಸಿ, ಶ್ರೀನಿವಾಸ ಸಿ.ಎಸ್ ಉಪಸ್ಥಿತರಿದ್ದರು.

ಟೊಯೊಟಾ ಕಿರ್ಲೋಸ್ಕರ್ ಕಂಪನಿಯೊಂದಿಗಿನ ಈ ಒಪ್ಪಂದವು ನಮ್ಮ ಸಂಸ್ಥೆಯ ಉದ್ದೇಶವನ್ನು ಪೂರ್ಣಗೊಳಿಸುವಂಥದ್ದಾಗಿದೆ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ನಿರ್ಮಾಣ ಕ್ಷೇತ್ರದ ದಿಗ್ಗಜನಾಗಿದ್ದು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದೊಡ್ಡ ಅನುಕೂಲ ಹಾಗೂ ಅವಕಾಶವನ್ನು ಸೃಷ್ಟಿಸಿದೆ. ಈ ಒಪ್ಪಂದದ ಮೂಲಕ ನಡೆಯಲಿರುವ ತರಬೇತಿ ಕಾರ್ಯಕ್ರಮಗಳು ನಮ್ಮ ವಿದ್ಯಾರ್ಥಿಗಳ ಕೌಶಲ್ಯ ಮತ್ತುಆತ್ಮವಿಶ್ವಾಸವನ್ನು ಹೆಚ್ಚಿಸುತ್ತª Éಎಂಬುದು ನಮ ್ಮದೃಢನಂಬಿಕೆಯಾಗಿದೆ.ಕ್ಷೇತ್ರ ಅನುಭವದ ಜೊತೆಗೆ ಜಪಾನ್ ಸಂಸ್ಕøತಿಯನ್ನು ಕಲಿಯುವ ವಿಶೇಷ ಅವಕಾಶ ವಿದ್ಯಾರ್ಥಿಗಳಿಗೆ ಲಭಿಸಲಿದೆ.
– ಡಾ.ಎಂ.ಮೋಹನ ಆಳ್ವ, ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ