Call Us Now: 08272 221717

ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ

June 13,2020

ಬಂಟ್ವಾಳ: ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಸರಪಾಡಿ ಇದರ ವತಿಯಿಂದ ಆಶಾಕಾರ್ಯಕರ್ತೆ ಗೌರವಧನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಂಸ್ಥೆಯ ಕಚೇರಿಯಲ್ಲಿ ವಿತರಿಸಿದರು.

ಬ್ಯಾಂಕ್‌ನ ಅಧ್ಯಕ್ಷ ಕೆ. ರಾಧಕೃಷ್ಣ ಮಯ್ಯ,ಉಪಾಧ್ಯಕ್ಷ ವಿಶ್ವನಾಥ ನಾಯ್ಕ ಕಾನೆಕೋಡಿ, ನಿದೇರ್ಶಕರಾದ ತಿಲಕ್ ಬಂಗೇರಾ, ದಯಾನಂದ ಶೆಟ್ಟಿ ಮುನ್ನಲಾಯಿ, ಜೋಕಿಂ ಪಿಂಟೋ, ನೀಶಾಂತ್ ಶೆಟ್ಟಿ,ನಾಣ್ಯಪ್ಪ ಪೂಜಾರಿ, ಕೃಷ್ಣ ಶಾಂತಿ, ಪ್ರೇಮ ವಿ ಆಳ್ವಾ, ವಸಂತಿ ಗೌಡ, ಕೆ.ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಧನಂಜಯ ಶೆಟ್ಟಿ ಸ್ವಾಗತಿಸಿದರು, ಮುಖ್ಯ ಕಾರ್ಯನಿವಾಹಣಾಧಿಕಾರಿ ಎಚ್.ಸುಧಾಕರ ಶೆಟ್ಟಿ ವಂದಿಸಿದರು.