Call Us Now: 08272 221717

ಬಂಟ್ವಾಳ: ದರಿಬಾಗಿಲು-ಕಳ್ಳಿಗೆ ರಸ್ತೆಗೆ ಡಾಮರು ಅಳವಡಿಕೆ: ಶಾಸಕರಿಂದ ಪರಿಶೀಲನೆ

May 23, 2020

ಬಂಟ್ವಾಳ: ಕಳ್ಳಿಗೆ ಗ್ರಾಮದ ಬಹುದಿನದ ಬೇಡಿಕೆ ಇಂದು ಈಡೇರಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬ್ರಹ್ಮರಕೂಟ್ಲು ಮೂಲಕ ಪೊಳಲಿ, ಕಟೀಲು ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ದರಿಬಾಗಿಲು-ಕಳ್ಳಿಗೆ ರಸ್ತೆ ಡಾಮರು‌ಅಳವಡಿಸಲಾಗಿದೆ.

ಬಂಟ್ವಾಳ ಶಾಸಕ ಉಳಿಪ್ಪಾಡಿ ರಾಜೇಶ್ ನಾಯ್ಕ್ ಅವರ ಅನುದಾನದಿಂದ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಳ್ಳಿಗೆ ಗ್ರಾಮ ಪಂಚಾಯತಿ ಸದಸ್ಯೆ ರೇವತಿ ಮಾಡಂಗೆ ಇತ್ತೀಚೆಗೆ ಕಾಮಗಾರಿಗೆ ಚಾಲನೆ ನೀಡಿದ್ದರು. ಶನಿವಾರ ಶಾಸಕರು ಖುದ್ದು ಕಳ್ಳಿಗೆ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರು ಕಳ್ಳಿಗೆ ಗ್ರಾಮದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಪಚ್ಚಿನಡ್ಕ ಬೂತ್ ಸಮಿತಿ ಅಧ್ಯಕ್ಷ ಗ್ಲ್ಯಾಂಡ್ಸನ್ ಡಿಸೋಜ, ನೆತ್ರಕೆರೆ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಜಾರಂದಗುಡ್ಡೆ ಬೂತ್ ಸಮಿತಿ ಅಧ್ಯಕ್ಷ ಶಿವರಾಜ್ ಜಾರಂದಗುಡ್ಡೆ, ಕಾರ್ಯದರ್ಶಿಗಳಾದ ಸುನೀಲ್ ಜಾರಂದಗುಡ್ಡೆ, ದಿನಕರ ಚಂದ್ರಿಗೆ ಕಳ್ಳಿಗೆ ಬಿಜೆಪಿ ಕಾರ್ಯಕರ್ತರಾದ ದೇವಿಪ್ರಸಾದ್, ಮನೋಜ್ ವಳವೂರು, ರಾಹುಲ್ ಪಚ್ಚಿನಡ್ಕ, ಲಕ್ಷ್ಮಣ್ ಕಂಜತ್ತೂರು, ಪ್ರಶಾಂತ್ ಮಾಡಂಗೆ, ಸಂದೀಪ್ ಬೀಡು ಮತ್ತಿತರರು ಉಪಸ್ಥಿತರಿದ್ದರು.