Call Us Now: 08272 221717

ಮೂಡುಬಿದಿರೆ ಭಟ್ಟಾರಕಶ್ರೀ ಚಾತುರ್ಮಾಸ ವ್ರತ ಆರಂಭ

July 7, 2020

ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಜೈನ ಮಠದಲ್ಲಿ ಚಾತುರ್ಮಾಸ ವ್ರತ ಆರಂಭಿಸಿದರು.

ವ್ರತಾಚರಣೆಗೂ ಮುನ್ನ ನವಗ್ರಹ ಶಾಂತಿ, ವೀರಶಾಸನ ಪೂಜೆ, ಕ್ರಿಯಾ ಪೂಜೆ ಮಂತ್ರ ಪಠಿಸಿ ಚಾತುರ್ಮಾಸ ಕಲಶ ಪ್ರತಿಷ್ಠಾಪಿಸಲಾಯಿತು.
ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು.