Call Us Now: 08272 221717

ಮೂಡುಬಿದಿರೆ : ಚಿರತೆ ದಾಳಿಗೆ ಹೋರಿ ಬಲಿ

June 22, 2020

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಎಂಬಲ್ಲಿ ಚಿರತೆಯೊಂದು ಹೋರಿ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಹೋರಿ ಸಾವನಪ್ಪಿದ ಘಟನೆ ಶನಿವಾರ ನಡೆದಿದೆ.


ಸಾವನಪ್ಪಿದ ಹೋರಿ ಕೇಮಾರು ಭಜನಾ ಮಂದಿರ ಸಮೀಪದ ರಾಜು ಮೇರ ಎಂಬವರಿಗೆ ಸೇರಿದ್ದಾಗಿದೆ. ಎಂದಿನಂತೆ ಮೇಯಲು ಹತ್ತಿರದ ಗುಡ್ಡಕ್ಕೆ ಹೋಗಿದ್ದ ಹೋರಿಯನ್ನು ಶನಿವಾರ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ದೇಹದ ಅರ್ಧ ಭಾಗವನ್ನು ಚಿರತೆ ತಿಂದು ಬಿಟ್ಟು ಹೋಗಿದ್ದು ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ಇದೇ ಮನೆಯ ಹಸುವೊಂದು ಚಿರತೆ ದಾಳಿಗೆ ಸಾವನಪ್ಪಿದ್ದು ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಮನೆಯವರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎನ್ನಲಾಗಿದೆ. ಹಾಗಾಗಿ ಈ ಬಾರಿ ಅರಣ್ಯ ಇಲಾಖೆಗೆ ದೂರು ನೀಡಲಿಲ್ಲ. ಹೋರಿಯನ್ನು ಮನೆ ಹತ್ತಿರದ ಗುಡ್ಡದಲ್ಲಿ ಹೂಳಲಾಗಿದೆ.

ಚಿತ್ರ-ಸಾಂದರ್ಭಿಕ