Call Us Now: 08272 221717

ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್‌ನಿಂದ ಪುರಸಭೆ ಪೌರ ನೌಕರ, ಕಾರ್ಮಿಕರಿಗೆ ಕಿಟ್ ವಿತರಣೆ

June 16, 2020

ಮೂಡುಬಿದಿರೆ: ಇಲ್ಲಿನ ಪುರಸಭೆಯ ಪೌರ ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ 55 ಆಹಾರ ಕಿಟ್, ನೂರು ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ವಿತರಿಸಲಾಯಿತು.

ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಪುರಸಭೆ ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ್ ಖಾರ್ವಿ, ಪುರಸಭೆ ಪರಿಸರ ಅಭಿಯಂತರರಾದ ಶಿಲ್ಪಾ ಎಸ್., ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್‌ನ ಏರಿಯಾ ಮನೇಜರ್ ನಟರಾಜ್, ಬ್ರಾಂಚ್ ಮೆನೇಜರ್ ಮಲ್ಲಿಕಾರ್ಜುನ, ಯಶವಂತ್ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.