Call Us Now: 08272 221717

ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

July 20, 2020

ಮೂಡುಬಿದಿರೆ: ಮಂಗಳೂರಿನಿಂದ ಮೂಡುಬಿದಿರೆಯತ್ತ ಬರುತ್ತಿದ್ದ ಜಯರಾಜ್ ಎಕ್ಸ್‍ಪ್ರೆಸ್ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಅಕಸ್ಮಾತ್ ಕಳಕೊಂಡಿದ್ದ ಪರ್ಸನ್ನು ಮರಳಿಸಿ ಬಸ್ ನಿರ್ವಾಹಕ ಸುಂದರ ಪೊಳಲಿ ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರ ನಡೆದಿದೆ.

ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ರಝಿಯಾ ಅವರು ಗಂಜಿಮಠದಲ್ಲಿ ಇಳಿದ ಸುಮಾರು 20 ನಿಮಿಷಗಳ ತನ್ನ ಪರ್ಸ್ ಎಲ್ಲೋ ಕಳೆದುಹೋಗಿರುವುದು ಅರಿವಿಗೆ ಬಂದಿತು. ಅದರಲ್ಲಿ
ರೂ. 6000, ಎಟಿಎಂ ಕಾರ್ಡ್ ಮತ್ತಿತರ ಅಗತ್ಯ ವಸ್ತುಗಳಿದ್ದವು. ತಕ್ಷಣ ಅವರು ತನ್ನ ಸಂಬಂಧಿ ಅತಾವುಲ್ಲಾ ಪಟ್ನಾ ಮತ್ತು ಮೂಡುಬಿದಿರೆಯ ವಕೀಲ ಎನ್.ಜಿ. ಇರ್ಷಾದ್ ಅವರಿಗೆ ವಿಷಯ ತಿಳಿಸಿದರು. ಇರ್ಷಾದ್ ಅವರು ತಕ್ಷಣ ಮೂಡುಬಿದಿರೆ ಬಸ್‍ನಿಲ್ದಾಣದ ಮೊಬೈಲ್ ಶಾಪ್ ಮಾಲಕ ಶಫೀಕ್ ಅವರಿಗೆ ಮಾಹಿತಿ ನೀಡಿದರು. ಅಷ್ಟರಲ್ಲೇ ಈ ಬಸ್ ಕಾರ್ಕಳದತ್ತ ಸಾಗಿಯಾಗಿತ್ತು. ಬಳಿಕ, ಶಫೀಕ್ ಅವರು ಬಸ್ ನಿರ್ವಾಹಕ ಸುಂದರ ಅವರ ಮೊಬೈಲ್ ನಂ. ಪಡೆದು ಇರ್ಷಾದ್ ಅವರಿಗೆ ನೀಡಿದರು. ಇರ್ಷಾದ್ ಅವರು ಸುಂದರ ಅವರಿಗೆ ಕರೆ ಮಾಡಿ ಬಸ್‍ನಲ್ಲಿ ಯಾವುದಾದರೂ ಪ¸ಕಾಣಸಿಕ್ಕಿದೆಯೇ ಎಂದು ವಿಚಾರಿಸಿದರು. ತಕ್ಷಣ ಸುಂದರ ಅವರು ಪರ್ಸ್ ಸಿಕ್ಕಿದೆ; ಅದನ್ನು ತೆಗೆದಿರಿಸಿದ್ದೇನೆ ಎಂದು ತಿಳಿಸಿದರು ಮತ್ತು ತಮ್ಮ ಬಸ್ ಮಂಗಳೂರಿಗೆ ಹಿಂತಿರುಗುವಾಗ ಗಂಜಿಮಠದ ಬಳಿ ವಾರೀಸುದಾರರಿಗೆ ಮರಳಿಸಿದರು.