Call Us Now: 08272 221717

ಮೂಡುಬಿದಿರೆ ಬಿಜೆಪಿಯಿಂದ ಕೊರೊನಾ ಜಾಗೃತಿ

July 28, 2020

ಮೂಡುಬಿದಿರೆ: ಕೊರೋನಾ ಸೋಂಕು ತಡೆಗಟ್ಟುವುದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಇಲ್ಲಿನ ಬಿಜೆಪಿ ವತಿಯಿಂದ ಆರಂಭಗೊಂಡ ವಾಹನ ಜಾಥಾ ಕಾರ‍್ಯಕ್ರಮಕ್ಕೆ ಕಲ್ಲಬೆಟ್ಟುನಲ್ಲಿ ಚಾಲನೆ ನೀಡಲಾಯಿತು.

ಬಿಜೆಪಿ ಮುಖಂಡ ಲಕ್ಷಣ ಪೂಜಾರಿ ವಾಹನ ಜಾಥಾಕ್ಕೆ ಚಾಲನೆ ನೀಡಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದಕ್ಕೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಅಗತ್ಯ. ಈ ಬಗ್ಗೆ ಪ್ರತಿಯೊಬ್ಬರಲ್ಲು ಜಾಗೃತಿ ಮೂಡಬೇಕು. ನಾವು ನಮ್ಮ ಆರೋಗ್ಯವನ್ನು ರಕ್ಷಿಸುವುದರ ಜತೆಗೆ ಜನರ ಆರೋಗ್ಯವನ್ನು ರಕ್ಷಿಸಬೇಕು ಎಂದರು, ಪಕ್ಷದ ಮುಖಂಡ ಗೋಪಾಲ ಶೆಟ್ಟಿಗಾರ್, ಪುರಸಭಾ ಸದಸ್ಯರಾದ ಸುಜಾತ ಶಶಿಕಿರಣ್, ಜಯಶ್ರೀ, ಶಶಿಕಿರಣ್ ಮತ್ತಿತರರು ಇದ್ದರು.