Call Us Now: 08272 221717

ಮಂಡ್ಯ ಜಿಲ್ಲೆ ಧಾರ್ಮಿಕ ಪರಿಷತ್ ಸದಸ್ಯರಾಗಿ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ನೇಮಕ

September 18, 2020

ಮೂಡುಬಿದಿರೆ: ಮಂಡ್ಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಅವರನ್ನು ಕರ್ನಾಟಕ ಸರ್ಕಾರವು ನೇಮಕ ಮಾಡಿದೆ.ಮಂಡ್ಯದಲ್ಲಿ ಉದ್ಯಮಿಯಾಗಿರುವ ಮೂಲತಃ ಮೂಡುಬಿದಿರೆ ನಿಡ್ಡೋಡಿಯವರಾದ ಜಗನ್ನಾಥ ಶೆಟ್ಟಿ ಅವರು, ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾಗಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.