Call Us Now: 08272 221717

ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗೆ ಮನವಿ

June 13,2020

ಮೂಡುಬಿದಿರೆ: ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ವತಿಯಿಂದ ಬೀಡಿ ಕೆಲಸಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಬುಧವಾರ ಸಂಘದ ಅಧ್ಯಕ್ಷೆ ರಮಣಿ ಮನವಿ ಸಲ್ಲಿಸಿದರು.
ಕೊರೋನಾ ವೈರಸ್‌ನಿಂದ ಎರಡು ತಿಂಗಳಿಂದ ಲಾಕ್‌ಡೌನ್ ಘೋಷಣೆ ಆಗಿ ಬೀಡಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ದುಸ್ತರವಾಗಿದೆ. ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಕಲ್ಯಾಣ ಮಂಡಳಿಯಿಂದಾಗಲೀ ಅಥವಾ ಬೀಡಿ ಮಾಲಕರಿಂದಾಗಲೀ ಯಾವುದೇ ಪರಿಹಾರ ಈವರೆಗೂ ಬಂದಿಲ್ಲ. ಅತ್ಯಂತ ಬಡ ಕಾರ್ಮಿಕ ವಿಭಾಗವಾದ ಬೀಡಿ ಕಾರ್ಮಿಕರು ಸರಕಾರದ ಪರಿಹಾರದ ನೀರಿಕ್ಷೆಯಲ್ಲಿದ್ದಾರೆ. ಲಾಕ್‌ಡೌನ್ ಅವಧಿ ರದ್ದುಪಡಿಸಿದರೂ ಈ ಸಮಸ್ಯೆ ಮುಂದುವರೆದಿದೆ. ಆದುದರಿಂದ ಬೀಡಿ ಕಾರ್ಮಿಕರಿಗೆ ರೂ.6000 ದಷ್ಟು ಪರಿಹಾರ ನಿಧಿಯನ್ನು ಘೋಷಣೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಬೀಡಿ ಕೆಲಸಗಾರರ ಸಂಘದ ಕರ‍್ಯದರ್ಶಿ ರಾಧಾ, ಕೋಶಾಧಿಕಾರಿ ಗಿರಿಜಾ, ಪದಾಧಿಕಾರಿಗಳಾದ ಬೇಬಿ, ಸರೋಜಿನಿ, ಮೊಹಮ್ಮದ್ ತಸ್ರಿಫ್, ಪ್ರಮೀಳಾ ಕೃಷ್ಣಪ್ಪ ನೆಡಿಗುಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.