Call Us Now: 08272 221717

ಕಡಂದಲೆ ಕ್ವಾರಂಟೈನ್ನಲ್ಲಿದ್ದ 8 ಮಂದಿ ಸುರತ್ಕಲ್ ಕೇಂದ್ರಕ್ಕೆ ಶಿಫ್ಟ್

May 23, 2020

ಮೂಡುಬಿದಿರೆ: ಕಡಂದಲೆ ಕ್ವಾರಂಟೈನ್ ಕೇಂದ್ರಕ್ಕೆ ಬಂದು, ಗುರುವಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಅ ವ್ಯಕ್ತಿಯ ಜೊತೆ ಬಂದ ಆರು ಮಂದಿ ಹಾಗೂ ಅಲ್ಲಿ ಕ್ವಾರಂಟೈನ್ ನಲ್ಲಿದ್ದ ಇಬ್ಬರನ್ನು ಶುಕ್ರವಾರ ಸುರತ್ಕಲ್ ಎನ್ ಐಟಿಕೆಯ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.
ಈ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.