Call Us Now: 08272 221717

ಮೂಡುಬಿದಿರೆ: ಹಂಡೇಲು ಮನೆಯಲ್ಲಿ ದನದ ಮಾಂಸ ಪತ್ತೆ, ಇಬ್ಬರ ಬಂಧನ

July 29, 2020

ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲಿನಲ್ಲಿ ಅಕ್ರಮವಾಗಿ ದನ ಮಾಂಸಗಳ ದಾಸ್ತಾನು ಇರಿಸಿದ ಅಡ್ಡೆಗೆ ಬುಧವಾರ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಮ್ಮದ್ ಬಾವ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ 15 ಕೆ.ಜಿ ದನದ ಮಾಂಸ ಪತ್ತೆಯಾಗಿದ್ದು, ಮಹಮ್ಮದ್ ಬಾವ ಹಾಗೂ ಇನ್ನೋರ್ವ ಆರೋಪಿ ಮಹಮ್ಮದ್ ರಫೀಕ್ ಎಂಬಾತನನ್ನು ಪೊಲೀಸರು ಬಂಧಿಸಿದರು.