Call Us Now: 08272 221717

ಜಿಲ್ಲಾಧಿಕಾರಿಗೆ ಬಹಿರಂಗ ಕೊಲೆ ಬೆದರಿಕೆ: ಮೂಡುಬಿದಿರೆ ಯುವಕನ ಬಂಧನ

July 29, 2020

ಮೂಡುಬಿದಿರೆ: ದಕ್ಷಿಣ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ನೀಡಿದ ಆರೋಪಿ, ಮೂಡುಬಿದಿರೆ ತಾಲೂಕಿನ ತೆಂಕಮಿಜಾರಿನ ಯುವಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ತೆಂಕಮಿಜಾರಿನ ನಿವಾಸಿ ರಂಜಿತ್(25) ಎಂಬಾತ ವಾರ್ಟ್ಸ್ ಅಪ್ ಗ್ರೂಪ್ ಒಂದರಲ್ಲಿ ಅಕ್ರಮ ಗೋ ಸಾಗಾಟ ಸಂದರ್ಭದ ವಿಚಾರದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯನ್ನು ಕಡಿಯಬೇಕು ಎನ್ನುವ ರೀತಿಯಲ್ಲಿ ಮೆಸೆಜ್ ಹಾಕಿದ್ದು, ನಂತರ ಅದು ವೈರಲ್ ಆಗಿತ್ತು. ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬಳಿಕ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.