Call Us Now: 08272 221717

ದರೆಗುಡ್ಡೆ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ

September 11, 2020

ಮೂಡುಬಿದಿರೆ: ಪ್ರಾಥಮಿಕ ಶಾಲೆಯಿಂದ ಭಡ್ತಿ ಹೊಂದಿರುವ ಆಂಗ್ಲ ಭಾಷಾ ಶಿಕ್ಷಕ ಅರುಣ್ ಡಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶಿವರಾಜ್ ಮತ್ತು ಕಲಾ ಶಿಕ್ಷಕಿ ವಿಲ್ಮಾ ಮೇರಿ ಡಿಸೋಜ ಅವರನ್ನು ದರೆಗುಡ್ಡೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನಿಸಲಾಯಿತು.

ಕಳೆದ ಬಾರಿ ಅತಿಥಿ ಶಿಕ್ಷಕರಾಗಿದ್ದ ಮಣಿತ್ ಜೈನ್ ಮತ್ತು ಸವಿತಾ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ, ನಾಮ ನಿರ್ದೇಶಿತ ಸದಸ್ಯರಾದ ಸಮಿತ್‍ರಾಜ್ ದರೆಗುಡ್ಡೆ, ಮುಖ್ಯ ಶಿಕ್ಷಕಿ ಅನ್ನಪೂರ್ಣ, ಮೀರಾ ಡಯಾಸ್, ಹಿಂದಿ ಶಿಕ್ಷಕ ಇಸ್ಮಾಯಿಲ್ ಉಪಸ್ಥಿತರಿದ್ದರು.