Call Us Now: 08272 221717

ದರೆಗುಡ್ಡೆಯಲ್ಲಿ ವನಮಹೋತ್ಸವ

July 4, 2020

ಮೂಡುಬಿದಿರೆ : ಕೈಗಾರೀಕರಣ, ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿಗಳಿಂದಾಗಿ ಹೊಸ ಹೊಸ ರೋಗಗಳು ಹುಟ್ಟುತ್ತಿವೆ. ಪರಿಸರದ ಸಮತೋಲನ ಕಳೆದು ಹೋಗಿ ಈ ಈ ಭೂಮಂಡಲ ಬರಿದಾಗಿ ಬರಡು ಭೂಮಿಯಾಗುವ ಅಪಾಯ ಇದೆ ಆದ್ದರಿಂದ ನಾವು ಪರಿಸರದ ಸಮತೋಲನವನ್ನು ಉಳಿಸಲೇ ಬೇಕಾಗಿದೆ ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸದಮಾದೇಷ್ಟ ಮತ್ತು ಜಿಲ್ಲಾ ಪೌರರಕ್ಷಣಾ ದಳದ ಮುಖ್ಯ ವಾರ್ಡನ್ ಡಾ.ಮುರಲಿ ಮೋಹನ್ ಚೂಂತಾರು ಎಚ್ಚರಿಸಿದರು.

ಅವರು ಮೂಡುಬಿದಿರೆ ಸಮೀಪದ ದರೆಗುಡ್ಡೆ ಅರಣ್ಯದಲ್ಲಿ ಜಿಲ್ಲಾ ಗೃಹರಕ್ಷಕದಳ ಪೌರರಕ್ಷಣಾ ದಳ ಮೂಡಬಿದಿರೆ ಅರಣ್ಯ ಇಲಾಖೆ ಮತ್ತು ಪೇಮ್ ಅಡ್ವೆಂಚರ್ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನ್ಯಾಯವಾದಿ ಭರತ್‍ರಾಜ್ ಅವರು ಮಾತನಾಡಿ `ಹಣ್ಣುಹಂಪಲುಗಳ ಗಿಡಗಳನ್ನು ಕಾಡಿನಲ್ಲಿ ನೆಡುವ ಮೂಲಕ ಆಹಾರ ಸಿಗದೆ ನಾಡಿಗೆ ಬರುವ ಕಾಡುಪ್ರಾಣಿಗಳ ಕಾಟ ನಿಯಂತ್ರಣಕ್ಕೆ ಬರುವುದು’ ಎಂದು ಅವರು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಅವರು ಪರಿಸರ ಸಂರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡಿದರು.

ಅರಣ್ಯ ರಕ್ಷಕ ಬಸವರಾಜ್ ಮತ್ತು ರಮೇಶ್ ಅಕಾಡೆಮಿಯ ನಿತಿನ್, ಅಜಯ ಕುಮಾರ್, ದ.ಕ. ಜಿಲ್ಲಾ ಗೃಹರಕ್ಷಕರಾದ ಸುನಿಲ್, ದಿವಾಕರ್, ಮಹೇಶ್, ಚೇತನ್, ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಪೇಮ್ ಅಡ್ವೆಂಚರ್ ಅಕಾಡೆಮಿಯ ಸಂತೋಷ್ ಪೀಟರ್ ಡಿ’ಸೋಜ ವಂದಿಸಿದರು.

ದ.ಕ. ಜಿಲ್ಲಾ ಪೌರರಕ್ಷಣಾ ತಂಡದ 30 ಮಂದಿ ಕಾರ್ಯಕರ್ತರ ಸಹಕಾರದೊಂದಿಗೆ ಸುಮಾರು ನೂರಕ್ಕೂ ಅಧಿಕ ಹಲಸು, ಮಾವು, ಪುನರ್ಪುಳಿ, ಹೆಬ್ಬಲಸು, ನೇರಳೆ ಮುಂತಾದ ಸುಮಾರು 100 ಗಿಡಗಳನ್ನು ಕಾಡಿನ ಮಧ್ಯೆ ನೆಡಲಾಯಿತು.