Call Us Now: 08272 221717

ಎಡನೀರು ಸ್ವಾಮೀಜಿಯವರಿಗೆ ಮೂಡುಬಿದಿರೆಯಲ್ಲಿ ಶ್ರದ್ಧಾಂಜಲಿ

September 13, 2020

ಮೂಡುಬಿದಿರೆ: ಧರ್ಮದ ಜೊತೆ ಕಲೆಯ ಆರಾಧನೆ ಮಾಡಿದವರು ಎಡನೀರು ಸ್ವಾಮೀಗಳು. ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿಯವರ ಕಲೆ ಮೇಲಿನ ಪ್ರೀತಿ ಆಳವಾದದ್ದು ಎಂದು ಮೂಡುಬಿದಿರೆ ಶ್ರೀ ಜೈನಮಠದ‌ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಸಮಾಜ ಮಂದಿರ ಸಭಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿನಡೆದ ಎಡನೀರು ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಮಾಜಿ ಸಚಿವ ಕೆ. ಅಭಯಚಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಎಡನೀರು ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಎಡನೀರು ಸ್ವಾಮೀಜಿ ಭಾವಚಿತ್ರಕ್ಕೆ ಅತಿಥಿಗಳೊಂದಿಗೆ ಅಭಿಮಾನಿಗಳು ಪುಷ್ಪಾರ್ಚನೆಗೈದರು. ಯಕ್ಷಗುರು ಮಹಾವೀರ ಪಾಂಡಿ, ಅಲಂಗಾರು ಸುಬ್ರಹ್ಮಣ್ಯ ಭಟ್, ಎಂಸಿಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ ಎಂ., ಕಲಾಪೋಷಕರಾದ ಎ.ಕೆ. ರಾವ್, ಯಕ್ಷ ಮೇನಕಾ ಸದಾಶಿವ ರಾವ್, ಕಲ್ಲೋಳಿ ಯುವರಾಜ್ ಜೈನ್, ಕುಂಟಾಡಿ ದಯಾನಂದ ಪೈ ಮೊದಲಾದವರಿದ್ದರು. ಯಕ್ಷದೇವ ಮಿತ್ರಕಲಾಮಂಡಳಿಯ ಅಧ್ಯಕ್ಷ ಎಂ. ದೇವಾನಂದ ಭಟ್ ನಿರೂಪಿಸಿದರು.