Call Us Now: 08272 221717

ಮೂಡುಬಿದಿರೆ ಗಂಟಾಲ್ಕಟ್ಟೆಯಲ್ಲಿ ಅಕ್ರಮ‌ ಕಸಾಯಿಖಾನೆಗೆ ದಾಳಿ

July 20, 2020

ಮೂಡುಬಿದಿರೆ : ಇಲ್ಲಿನ ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು‌ ದಾಳಿ ನಡೆಸಿದ್ದಾರೆ.

ಗಂಟಾಲ್‌ಕಟ್ಟೆ ನೀರಲ್ಕೆ ಎಂಬಲ್ಲಿ ಆರೋಪಿ ಮನ್ಸೂರು ಎಂಬಾತ ತನ್ನ ಮನೆಯ ಹಿಂದೆ ಅಕ್ರಮ ಕಸಾಯಿಖಾನೆ ನಿರ್ಮಿಸಿ ಮಾಂಸ ಮಾಡುತ್ತಿದ್ದ. ಈತನೊಂದಿಗೆ ಶೌಕತ್, ಮುಸ್ತಾಕ್ ಉಲಾಯಿಬೆಟ್ಟು ಮತ್ತು ಆಸಿಫ್ ಎಂಬವರು ಜೊತೆ ಸೇರಿದ್ದರು. ಆರೋಪಿಗಳು ಜಾನುವಾರುಗಳನ್ನು ಕದ್ದು ತಂದು ಮಾಂಸ ಮಾಡಿ ದಂಧೆ ನಡೆಸುತ್ತಿದ್ದರು.
ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿ ಮೂರು ಕೋಣಗಳು, ದನದ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಆಯುಧಗಳು ಪತ್ತೆಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ.