Call Us Now: 08272 221717

ಹಂಡೇಲು: ಟೆಂಪೋ-ಬೈಕ್ ಡಿಕ್ಕಿ-ಬೈಕ್ ಸವಾರ ಸಾವು

September 13, 2020

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ, ಪುತ್ತಿಗೆ ಗ್ರಾಮದ ಹಂಡೇಲುಸುತ್ತು ಎಂಬಲ್ಲಿ ಭಾನುವಾರ ಬೆಳಗ್ಗೆ ಟೆಂಪೋ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ, ಬೈಕ್ ಸವಾರ ಮೃತಪಟ್ಟಿದ್ದಾರೆ.

ಕಾಂತಾವರ ನಿವಾಸಿ ಸಂತೋಷ್ ಶೆಟ್ಟಿ(34) ಮೃತಪಟ್ಟ ಸವಾರ. ಸಂತೋಷ್ ಶೆಟ್ಟಿ ತನ್ನ ಮಾವ ಜಯರಾಮ ಶೆಟ್ಟಿ ಎಂಬವರೊಂದಿಗೆ ಕಾಂತವಾರದಿಂದ ಮಿಜಾರಿನಲ್ಲಿರುವ ಸಂಬಂಧಿಕರ ಮನೆಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ, ಹಂಡೇಲು ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸಂತೋಷ್ ಶೆಟ್ಟಿ ಅವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಹಸವಾರ ಜಯರಾಮ ಶೆಟ್ಟಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.