Call Us Now: 08272 221717

ಗೋವು ಅಕ್ರಮ ಸಾಗಾಟದ ವಿರುದ್ಧ ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಮನವಿ

September 11, 2020

ಮೂಡುಬಿದಿರೆ : ಗೋವು ಅಕ್ರಮ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆ ಮೂಡುಬಿದಿರೆ ವತಿಯಿಂದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್.ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಂದು ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಹಿಂದು ಯುವವಾಹಿನಿ ತಾಲೂಕು ಸಂಯೋಜಕ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಕಾರ್ಯದರ್ಶಿ ಸಂದೀಪ್ ಹೆಗ್ಡೆ, ಭಗತ್ ಸಿಂಗ್ ಘಟಕದ ಅಧ್ಯಕ್ಷ ಭಾಸ್ಕರ್ , ಪ್ರಧಾನ ಕಾರ್ಯದರ್ಶಿ ಅನೀಶ್ ಉಪಸ್ಥಿತರಿದ್ದರು.