Call Us Now: 08272 221717

ಮೂಡುಬಿದಿರೆ: ರೋಟರಿ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

August 15, 2020

ಮೂಡುಬಿದಿರೆ: ರೋಟರಿ ಎಜ್ಯುಕೇಶನ್ ಸೊಸೈಟಿಯ ರೋಟರಿ ವಿದ್ಯಾಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಸುದೀಪ್ ಧ್ವಜಾರೋಹನಗೈದರು.
ರೋಟರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ನಾರಾಯಣ. ಪಿ. ಎಂ ಅಧ್ಯಕ್ಷತೆವಹಿಸಿದರು.

ಕಾರ‍್ಯದರ್ಶಿ ಅನಂತಕೃಷ್ಣ ರಾವ್, ಕೋಶಾಧಿಕಾರಿ ಶ್ರೀಕಾಂತ ಕಾಮತ್, ಸಂಸ್ಥೆಯ ಸಂಚಾಲಕ ಡಾ. ಯತಿಕುಮಾರಸ್ವಾಮಿ ಗೌಡ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ರೋರ‍್ಯಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ.ಕೋಸ್ತಾ ಸ್ವಾಗತಿಸಿದರು. ಫ್ರೌಢಶಾಲಾ ಮುಖ್ಯ ಶಿಕ್ಷಕ ತಿಲಕ ಜೈನ್ ವಂದಿಸಿದರು. ಪೂಜಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.