Call Us Now: 08272 221717

ಆಯೋಧ್ಯೆ ಭೂಮಿ ಪೂಜೆಗೆ ಮೂಡುಬಿದಿರೆ ಜೈನ ಆಧ್ಯಾತ್ಮಕೇಂದ್ರಗಳ ಮೃತ್ತಿಕೆ ಹಸ್ತಾಂತರ

July 31, 2020

ಮೂಡುಬಿದಿರೆ:ಅಯೋಧ್ಯೆಯ ಶ್ರೀ ರಾಮ ಮಂದಿರ ಭೂಮಿ ಪೂಜೆಗಾಗಿ ಜೈನ ಅಧ್ಯಾತ್ಮ ಕೇಂದ್ರಗಳ ಪವಿತ್ರ ಮೃತ್ತಿಕೆಗಳನ್ನು ಹಸ್ತಾಂತರಿಸಲಾಯಿತು.

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಮೃತ್ತಿಕೆಯನ್ನು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರಿಗೆ ಹಸ್ತಾಂತರಿಸಿದರು. ಮೊದಲು ಜೈನ ಸಿದ್ದಕ್ಷೇತ್ರ ಕೈಲಾಸಗಿರಿ ಸಮ್ಮೇದ ಶಿಖರ್ಜಿ, ಗಿರಿನಾರ್, ಚಂಪಾಪುರಿ, ಪಾವಪುರಿ ಹಾಗೂ ಮೂಡುಬಿದಿರೆ ಅತಿಶಯ ಕ್ಷೇತ್ರ ಬಸದಿ ಸ್ಥಳದ ಪವಿತ್ರ ಮೃತ್ತಿಕೆಯನ್ನು ದೇವರ ಬಳಿ ಕಲಶದಲ್ಲಿಟ್ಟು ಸಂಕಲ್ಪ ಪ್ರಾರ್ಥನೆ ನೆರವೇರಿಸಲಾಯಿತು.
ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ ಅವರು, ಅಯೋಧ್ಯೆ ರಾಮಮಂದಿರಕ್ಕೆ ನಡೆಯುವ ಭೂಮಿಪೂಜೆಯು ನಿರ್ವಿಘ್ನವಾಗಿ ನಡೆಯಲಿ. ಭೂಮಿಪೂಜೆಯ ದಿನ ಶಾಂತಿ ಸೌಹಾರ್ದ ಹಾಗೂ ಶ್ರೀ ದೇವರ ಅನುಗ್ರಹ ಕ್ಕಾಗಿ ಮನೆಯ ಹೊಸ್ತಿಲಿನಲ್ಲಿ ದೀಪ ಬೆಳಗಿ ಪ್ರಾರ್ಥನೆಯನ್ನು ಎಲ್ಲರು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೋಪಾಲ್ ಕುತ್ತಾರ್, ಮುಖಂಡರಾದ ಶರಣ್ ಪಂಪ್‌ವೆಲ್, ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಕ್ಕೆ 1991 ರಲ್ಲಿ ಇಟ್ಟಿಗೆ ಯನ್ನು ದೇಶದ ನಾನಾ ಭಾಗಗಳಿಂದ ಕಳುಹಿಸಿದ ಸಂದರ್ಭದಲ್ಲಿ ಹಿಂದಿನ ಜ್ಞಾನ ಯೋಗಿ ಭಟ್ಟಾರಕರ ಉಪಸ್ಥಿತಿಯಲ್ಲಿ ಮೂಡುಬಿದಿರೆ ಸಾವಿರ ಕಂಬದ ಬಸದಿಯ ಮೂಲಕ ಕಳುಹಿಸಿ ಕೊಡಲಾಗಿತ್ತು ಎಂದು ಅಂದು ಜವಾಬ್ದಾರಿ ವಹಿಸಿದ್ದ ವೆಂಕಟೇಶ್ ಕಿಣಿ, ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದು ಸ್ಮರಿಸಿದರು.