Call Us Now: 08272 221717

ಜೆಸಿಐ ಮೂಡುಬಿದಿರೆ ತ್ರಿಭುವನ್ ಜೇಸಿ ಸಪ್ತಾಹ 2020 ಉದ್ಘಾಟನೆ

September 9, 2020

ಮೂಡುಬಿದಿರೆ: ಕೊರೊನ ಲಾಕ್‍ಡೌನ್ ಸಂದರ್ಭದಲ್ಲಿ ಜೆಸಿಐ ಸಕಾರತ್ಮಕ ರೀತಿಯಲ್ಲಿ, ಸೃಜನಶೀಲವಾಗಿ ಕೆಲಸ ಮಾಡಿದೆ. ಮೂಡುಬಿದಿರೆ ಜೆಸಿಐ ಘಟಕವು ಈ ಅವಧಿಯಲ್ಲಿ ಹೆಚ್ಚು ಆನ್‍ಲೈನ್ ತರಬೇತಿಗಳನ್ನು ಆಯೋಜಿಸುವುದರ ಮೂಲಕ ರಿಜನ್ ಎಫ್‍ನಲ್ಲಿ ಮಾದರಿಯಾಗಿ ಗಮನಸೆಳೆದಿದೆ ಎಂದು ಜೆಸಿಐ ವಲಯ 15ರ ಉಪಾಧ್ಯಕ್ಷ ಮೇಧಾವಿ ಶ್ಲಾಘಿಸಿದರು.

ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ನಡೆಯುವ ಜೇಸಿ ಸಪ್ತಾಹ 2020 ಅನ್ನು ಮೂಡುಬಿದಿರೆ ಸಮಾಜಮಂದಿರದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ಪೂರ್ವಾಧ್ಯಕ್ಷ ಪ್ರತಾಪ್ ಕುಮಾರ್ ಮಾತನಾಡಿ, ಜೆಸಿಐ ಸೀನಿಯರ್ ಘಟಕವನ್ನು ಸ್ಥಾಪಿಸುವ ಪ್ರಸ್ತಾವನೆಯಿಟ್ಟರು.
ಜೆಸಿಐ ಮೂಡುಬಿದಿರೆ ಅಧ್ಯಕ್ಷ ಸಂತೋಷ್ ಕುಮಾರ್, ಪೂರ್ವಾಧ್ಯಕ್ಷರಾದ ಹಸ್ದುಲ್ಲಾ ಇಸ್ಮಾಯಿಲ್, ಗೋಪಾಲಕೃಷ್ಣ ಕಾಮತ್, ಸುದೀಪ್ ಬುನ್ನನ್, ಕಾರ್ಯದರ್ಶಿ ದಯಾನಂದ ಹೆಗ್ಡೆ, ಜೇಸಿರೇಟ್ ಅಧ್ಯಕ್ಷೆ ವೀಣಾ ಸಂತೋಷ್, ಜೇಸಿ ಸಪ್ತಾಹ ಸಂಯೋಜಕಿ ಶಾಂತಲಾ ಆಚಾರ್ಯ, ಜೆಜೆಸಿ ಅಧ್ಯಕ್ಷ ಜಯ ಕುಮಾರ್ ಉಪಸ್ಥಿತರಿದ್ದರು.
ಸಂತೋಷ್ ಶೆಟ್ಟಿ ಜೇಸಿವಾಣಿ ವಾಚಿಸಿದರು.