Call Us Now: 08272 221717

ಜೆಸಿಐ ಮೂಡುಬಿದಿರೆ ತ್ರಿಭುವನ್‍ನಿಂದ ರಕ್ತದಾನ ಶಿಬಿರ

September 13, 2020

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಜೇಸಿ ಸಪ್ತಾಹ 2020 ಅಂಗವಾಗಿ ಮೂಡುಬಿದಿರೆ ಸಮಾಜಮಂದಿರದಲ್ಲಿ ಶನಿವಾರ ರಕ್ತದಾನ ಶಿಬಿರ ನಡೆಯಿತು.ಜೆಸಿಐ ವಲಯ 15ರ ಆಡಳಿತ ನಿರ್ದೇಶಕ ರಾಯನ್ ಕ್ರಾಸ್ತ ಶಿಬಿರವನ್ನು ಉದ್ಘಾಟಿಸಿದರು.
ಮಂಗಳೂರು ವೆನ್ಲಾಕ್ ರಕ್ತನಿಧಿಯ ಮುಖ್ಯಸ್ಥ ಡಾ.ಅಂಥೋನಿ, ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಜೆಸಿಐ ಪೂರ್ವಾಧ್ಯಕ್ಷ ಯುವರಾಜ್ ಜೈನ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ದಯಾನಂದ ಹೆಗ್ಡೆ, ಮೂಡುಬಿದಿರೆ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯರಾಮ್ ರಾವ್, ಶ್ರೀರಾಮಾಂಜನೇಯ ಜಿಮ್‍ನ ಮಾಲಿಕ ನಾರಾಯಣ ಪಡುಮಲೆ, ಸಮೃದ್ಧಿ ಯೂತ್ ಕ್ಲಬ್‍ನ ಅಧ್ಯಕ್ಷ ಸುಜಿತ್ ಎಂ.ಎಸ್, ಜೆಸಿಐ ಮೂಡುಬಿದಿರೆ ಪೂರ್ವಾಧ್ಯಕ್ಷರಾದ ಸಂಗೀತ ಪ್ರಭು, ಮಹೇಂದ್ರವರ್ಮ, ಜೆಸಿಐ ಸದಸ್ಯ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು. ನವೀನ್ ಟಿ.ಆರ್ ಶಿಬಿರವನ್ನು ಸಂಯೋಜಿಸಿದರು.
ಶಿಬಿರದಲ್ಲಿ 37 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು