Call Us Now: 08272 221717

ಮೂಡುಬಿದಿರೆ ಜೆಸಿಐ ತ್ರಿಭುವನ್ ನಿಂದ ರಕ್ತದಾನಿ ಪ್ರವೀಣ್ ಜೈನ್‍ಗೆ ಸನ್ಮಾನ

June 19, 2020

ಮೂಡುಬಿದಿರೆ : ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೇಸಿಐ ಮೂಡುಬಿದಿರೆ ತ್ರಿಭುವನ್ ಇದರ ವತಿಯಿಂದ ಸುಮಾರು 17 ವರ್ಷಗಳಲ್ಲಿ 55 ಬಾರಿ ರಕ್ತದಾನ ಮಾಡಿರುವ ಪ್ರವೀಣ್ ಜೈನ್ ಇವರನ್ನು ಬೆಳುವಾಯಿಯ ಶ್ರೀ ಮಹಾಮ್ಮಾಯಿ ದೇವಸ್ಥಾನದ ವಠಾರದಲ್ಲಿ ಭಾನುವಾರ ಸನ್ಮಾನಿಸಲಾಯಿತು.

ಜೇಸಿಐ ಮೂಡುಬಿದಿರೆ ತ್ರಿಭುವನ್‍ನ ಅಧ್ಯಕ್ಷ ಜೇಸಿ ಸಂತೋಷ್ ಕುಮಾರ್, ಜೇಸಿರೇಟ್ ಅಧ್ಯಕ್ಷೆ ವೀಣಾ ಸಂತೋಷ್, ಸದಸ್ಯರುಗಳಾದ ಸುನೀಲ್, ಶಾಂತಲಾ, ವರುಣ್ ಸ್ಥಳೀಯರಾದ ಗಿರೀಶ್ ಶೆಟ್ಟಿ, ಅಚ್ಚುತ ಶೆಟ್ಟಿ ಮತ್ತು ಗುರುಪ್ರಸಾದ್ ಈ ಸಂದರ್ಭದಲ್ಲಿದ್ದರು.