Call Us Now: 08272 221717

ಮೂಡುಬಿದಿರೆ ಜೆಸಿಐ ಮೂಡುಬಿದಿರೆ ತ್ರಿಭುವನ್ ನಿಂದ ಯೋಗ ಶಿಬಿರ

June 28, 2020

ಮೂಡುಬಿದಿರೆ : ಜೆಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಯಪ್ರಯುಕ್ತ ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ಯೋಗ ಶಿಬಿರ ಮತ್ತು ತರಬೇತಿ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಲಾಯಿತು.

ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಸದಸ್ಯ ನವೀನ್ ಟಿ.ಆರ್ ಉದ್ಘಾಟಿಸಿದರು. ಪತಂಜಲಿ ಯೋಗ ಸಮಿತಿಯ ಯೋಗ ತರಬೇತುದಾರ ಕಿಶೋರ್ ಕುಮಾರ್ ತರಬೇತಿ ನೀಡಿದರು. ಸಹತರಬೇತುದಾರ ಉದಯ್ ಕುಮಾರ್, ಜೆಸಿಐ ಕಾರ್ಯದರ್ಶಿ ದಯಾನಂದ ಹೆಗ್ಡೆ ಉಪಸ್ಥಿರಿದ್ದರು.