Call Us Now: 08272 221717

ಜೆ.ಇ.ಇ ಮೈನ್ಸ್: ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಿಂದ ಅತ್ಯುತ್ತಮ ಸಾಧನೆ

September 14, 2020

ಮೂಡುಬಿದಿರೆ: ಜೆಇಇ ಮೈನ್ಸ್) ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 56 ವಿಧ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಅರ್ಹತೆ ಹೊಂದಿ ಶೇ.100 ಫಲಿತಾಂಶ ಪಡೆದಿದೆ.
ಮದನ್ ವೈ.ಎನ್ (99.64) , ನಿಖಿಲ್ ಎಲ್.ಜಿ (96.36), ಶರತ್ ಕುಮಾರ್ ಎಸ್.ಭಟ್ (95), ಅಂಕುಶ್ ಪ್ರಸಾದ್ ಪಾಟಕ್ (91.3) ಹಾಗೂ ಧರ್ಮತೇಜ (90.2) 90 ಪರ್ಸೆಂಟೈಲ್‍ಕ್ಕಿಂತಲೂ ಹೆಚ್ಚಿನ ಅಂಕಗಳೊಂದಿಗೆ ಅರ್ಹತೆಯನ್ನು ಪಡೆದಿದ್ದಾರೆ. ಉಳಿದಂತೆ 15 ವಿದ್ಯಾರ್ಥಿಗಳು ಶೇ.85 ಅಧಿಕ ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ, ಐಐಟಿ ಸಂಯೋಜಕ ಪ್ರೊ.ರಾಮಮೂರ್ತಿ, ಪ್ರೊ.ಜಗನ್ ಮೋಹನ್ ರಾವ್, ಡಾ.ದಯಾನಂದ್, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.