Call Us Now: 08272 221717

ಮೂಡುಬಿದಿರೆ ಬಸದಿಗಳಲ್ಲಿ ಜೀವದಯಾಷ್ಟಮಿ

October 26, 2020

ಮೂಡುಬಿದಿರೆ: ನವರಾತ್ರಿಯ ಎಂಟನೇ ದಿನ ಜೈನಕಾಶಿ ಮೂಡುಬಿದಿರೆಯಲ್ಲಿ ಜೈನ ಸಮಾಜ ಬಾಂಧವರು ಜೀವದಯಾಷ್ಟಮಿ, 10ನೇ ತೀರ್ಥಂಕರ ಶೀತಲನಾಥಸ್ವಾಮಿ ಮೋಕ್ಷ ಕಲ್ಯಾಣವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ 18 ಬಸದಿಗಳ ದರ್ಶನ ಮಾಡಿ ಜಿನೇಂದ್ರ ಭಗವಂತರಿಗೆ ಅಘ್ರ್ಯ ಸಮರ್ಪಿಸಿದರು.


ಬೆಳಗ್ಗೆ ಜೈನ ಮಠದಲ್ಲಿ ವಿಶೇಷ ಅಭಿಷೇಕದಲ್ಲಿ ಪಾಲ್ಗೊಂಡು ಧವಲತ್ರಯ ಶಾಸ್ತ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಂ.ವಿ ಶೆಟ್ಟಿ ಅನುವಾದಿಸಿದ ಸಾಮುದ್ರಿಕ ಶಾಸ್ತ್ರ ಧವಲತ್ರಯ ಟ್ರಸ್ಟ್ ಪ್ರಕಾಶಿತ ಪುಸ್ತಕವನ್ನು ಬೆಟ್ಕೇರಿ ದಿನೇಶ್ ಕುಮಾರ್ ಶಾಸ್ತ್ರದಾನ ಮಾಡಿದರು. ಉದ್ಯಮಿ ರಜನಿ ಲಾಲ್ ಗೋಯಲ್ ಅವರು ಬರೆದ ಶತಷ್ಟ ನಾಮಾವಳಿ ಪುಸ್ತಕ ಸ್ವಾಮೀಜಿ ಬಿಡುಗಡೆ ಮಾಡಿದರು.
ಪಟ್ಣಶೆಟ್ಟಿ ಸುದೇಶ್ ಕುಮಾರ್, ಎ. ದಿನೇಶ್ ಕುಮಾರ್, ಡಾ. ಎಸ್. ಪಿ. ವಿದ್ಯಾಕುಮಾರ್, ಸಂಜಯಂತ ಕುಮಾರ್, ಎಂ.ಬಾಹುಬಲಿ ಪ್ರಸಾದ್,ಸಾಹಿತಿ ರವಿರಾಜ್ ಜೈನ್, ಜಿನೇಂದ್ರ ಬಲ್ಲಾಳ್ ಉಪಸ್ಥಿತರಿದ್ದರು.
ಅವಿಭಜಿತ ದ. ಕ. ಜಿಲ್ಲೆಯ ದಿಗಂಬರ ಜೈನ ಧರ್ಮೀಯರು, ಮಹಾರಾಷ್ಟ್ರ, ಕರ್ನಾಟಕ, ಕೇರಳ ವಯನಾಡ್, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಕಡೆಯಿಂದ ಯಾತ್ರಾರ್ಥಿಗಳು ಬಸದಿಗಳ ದರ್ಶನ ಪಡೆದರು.