Call Us Now: 08272 221717

ಬಾವಿಯಿಂದ ಶವ ಮೇಲಕ್ಕೆತ್ತಿದ್ದ ಮೂಡುಬಿದಿರೆಯ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್

October 11, 2020

ಮೂಡುಬಿದಿರೆ: ಕಡಂದಲೆ ಗ್ರಾಮದ ಉಮನಪಾಲು ಎಂಬಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವರು ಶನಿವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಾವಿಗೆ ಯಾರೂ ಇಳಿಯದಿದ್ದಾಗ, ಮೂಡುಬಿದಿರೆ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಬಾವಿಗಿಳಿದು, ಶವವ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.

ವಿಜಯ ಕರ್ಕೇರ (47ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಳೆದ 3-4 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ವಿಜಯ ಕರ್ಕೇರಾ ಮನೆಯಲ್ಲಿ ಕಾಣದಿದ್ದಾಗ, ಮನೆಯವರು ಹುಡುಕಾಡಿದ್ದಾರೆ. ಬಾವಿಯ ಬಳಿ ನೋಡಿದಾಗ ವಿಜಯ ಅವರ ವಸ್ತ್ರವಿರುವುದು ಕಂಡುಬಂದಿದ್ದು, ಬಾವಿಗೆ ಇಣುಕಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ವಿಜಯ್ ಅವರ ಸಹೋದರ ಉದಯ ಪೂಜಾರಿ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ನಿರೀಕ್ಷ ಬಿ.ಎಸ್.ದಿನೇಶ್ ಕುಮಾರ್ ಶವವನನ್ನು ಮೇಲಕ್ಕೆ ಎತ್ತಿದರು. ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕರಿಸಿದ್ದಾರೆ.