Call Us Now: 08272 221717

ಪುತ್ತಿಗೆಯಲ್ಲಿ ತೋಟ, ಹೊಲಗಳು ಜಲಾವೃತ ಅಭಯಚಂದ್ರ ಜೈನ್ ಪರಿಶೀಲನೆ

September 22, 2020

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಕಂಚಿಬೈಲು ಕಿಂಡಿ ಅಣೆಕಟ್ಟಿಗೆ ತಡೆ ಹಾಕಿದ್ದ ಹಲಗೆಗಳನ್ನು ತೆಗೆಯದ ಪರಿಣಾಮ ಪುತ್ತಿಗೆ, ಪಾಲಡ್ಕ, ಪರಿಸರದಲ್ಲಿ ಹೊಳೆಯ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿದ್ದು ಸುಮಾರು 100 ಎಕರೆಯಷ್ಟು ಕೃಷಿಭೂಮಿಗೆ ಅಪಾಯ ಎದುರಾಗಿದೆ.

ಪುತ್ತಿಗೆಯಲ್ಲಿ ತೋಟ, ಹೊಲಗಳಿಗೆ ನುಗ್ಗಿದ ನೀರು ಈ ಹೊಳೆಯ ಹಾದಿಯಲ್ಲಿರುವ ಮದಿಮಲ್ ಗುಂಡಿ, ಎರುಗುಂಡಿ ಮೊದಲಾದ ಕಡೆಗಳಲ್ಲಿ ಮಿತಿಮೀರಿದ ಮಟ್ಟಕ್ಕೇರಿದ್ದು ಹತ್ತಿರದ ಕೆಲವು ಮನೆಗಳು, ಪಂಪ್‍ಶೆಡ್‍ಗಳು ಅಪಾಯವನ್ನೆದುರಿಸುವಂತಾಗಿದೆ.
ಮಾಜಿ ಶಾಸಕ ಅಭಯಚಂದ್ರ ಜೈನ್ ಸೋಮವಾರ ಕಂಚಿಬೈಲು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ಕೃಷಿಕರಲ್ಲಿ ಧೈರ್ಯ ತುಂಬಿದರು ಹಾಗೂ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ ಹಲಗೆಗಳನ್ನು ತೆಗೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಪುತ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ನಾಯಕ್, ಸೇವಾದಳದ ಅಧ್ಯಕ್ಷ ವಾಸುದೇವ ನಾಯಕ್, ಪಿಡಿಒ ಸುನೀತಾ ಜಿ ಸಾಲ್ಯಾನ್, ಪಂಚಾಯಿತಿ ಆಡಳಿತಾಧಿಕಾರಿ ವಿ.ಎಸ್. ಕುಲವರ್ಣಿ, ಅಣೆಕಟ್ಟು ನಿರ್ವಹಣಾ ಸಮಿತಿಯ ಅಧ್ಯಕ್ಷ ಮ್ಯಾಕ್ಸಿಮ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.