Call Us Now: 08272 221717

ಮೂಡುಬಿದಿರೆ: ಬಿಜೆಪಿಯಿಂದ ಆಯೋಧ್ಯೆ ಕರಸೇವಕರಿಗೆ ಗೌರವ

August 6, 2020

ಮೂಡುಬಿದಿರೆ: ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ಪ್ರಯುಕ್ತ 1990-1992 ಅಯೋಧ್ಯೆಗೆ ಕರಸೇವಕರ ತೆರಳಿದ 15ಮಂದಿ ಕರಸೇವಕರನ್ನು ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದಿಂದ ಗೌರವಿಸಲಾಯಿತು.

ಟಿ.ರಘುವೀರ್ ಶೆಣೈ, ಎಂ ಅನಂತ ಪ್ರಭು. ಮಾಧವರಾಯ ಕಾಮತ್., ಎಂ ತುಕರಾಮ ಮಲ್ಯ, ಪ್ರಸನ್ನ ವಿ.ಶೆಣೈ, ಶೀನ ಸುವರ್ಣ, ಪದ್ಮನಾಭ ಗಾಂಧಿನಗರ, ರವೀಂದ್ರ ಪೈ ಕಲ್ಲಬೆಟ್ಟು. ಬಿ ವಿಶ್ವನಾಥ್ ಕಾಮತ್ ಬೋಳ, ನಾಗೇಶ್ ಗೌಡ ಮುಚ್ಚೂರು, ಈಶ್ವರ ಭಟ್ ಕಾನ, ಮನೋಹರ್ ಮಲ್ಯ. ಮಾಧವರಾಯ ಪ್ರಭು ನಿಡ್ಡೋಡಿ, ಸೀತಾರಾಮ ಆಚಾರ್ಯ ಬೆಳವಾಯಿ ಅವರನ್ನು ಗೌರವಿಸಲಾಯಿತು. ವಿಧಿವಶರಾಗಿರುವ ಮೂವರು ಕರಸೇವಕರ ಪರವಾಗಿ ಅವರ ಮನೆಗೆ ತೆರಳಿ ಕುಟುಂಬದವನ್ನು ಗೌರವಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಸಂಘದ ಪ್ರಮುಖರಾದ ವಿವೇಕಾನಂದ ಕಾಮತ್ ಸಂಪಿಗೆ, ಮಂಜುನಾಥ್ ಬೆಳುವಾಯಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿಂಗಳಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಸುಕೇಶ್ ಶೆಟ್ಟಿ ಲಕ್ಷ್ಮಣ ಪೂಜಾರಿ, ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಶ್ಯಾಮ್ ಹೆಗ್ಡೆ, ಎಸ್.ಎನ್ ಬೋರ್ಕರ್, ಮಂಡಲ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷ ಸೋಮನಾಥ್ ಕೋಟ್ಯಾನ್, ಪುರಸಭೆ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ. ಬಜರಂಗದಳದ ಸುಚೇತನ್ ಜೈನ್, ಶರತ್ ಲಾಡಿ, ಮೂಡುಬಿದಿರೆ ತಾಪಂ ಸದಸ್ಯ ಸಂತೋಷ್ ಬೆಳವಾಯಿ, ಕೆ.ಆರ್ ಪಂಡಿತ್, ರಾಜೇಶ್ ಶೆಟ್ಟಿ. ರಾಘವ ಹೆಗಡೆ, ಸುಭಾಷ್ ನಗರ ಹಾಗೂ ಸಂಘ ಪರಿವಾರ ಕಾರ್ಯಕರ್ತರು ಉಪಸ್ಥಿತರಿದ್ದರು.