Call Us Now: 08272 221717

ಕರಿಂಜೆಗುತ್ತು ಅಂಗನವಾಡಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

October 12, 2020

ಮೂಡುಬಿದಿರೆ: ಇಲ್ಲಿನ ನಾಲ್ಕು ಅಂಗನವಾಡಿ ಕೇಂದ್ರಗಳ ನೇತೃತ್ವದಲ್ಲಿ ಕರಿಂಜೆಗುತ್ತು ಅಂಗನವಾಡಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು.
ಪುರಸಭಾ ಸದಸ್ಯೆ ಜಯಶ್ರೀ ಕಾರ್ಯಕ್ರವನ್ನು ಉದ್ಘಾಟಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ, ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಜೀವರಕ್ಷಣೆ ಕುರಿತು ಮಾಹಿತಿ ನೀಡಿದರು.

ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ಲಾವಣಿ ಕಾನೂನು ಮಾಹಿತಿ ನೀಡಿದರು.
ಕರಿಂಜೆ ಗುತ್ತು ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸುಶ್ಮಿತಾ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಡುಬಿದಿರೆ ವಲಯ ಮೇಲ್ವೀಚಾರಕಿ ಭಾರತಿ, ಕರಿಂಜೆಗುತ್ತು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಪ್ರಿಯಾ ಶೆಟ್ಟಿ, ಶೋಭಾ (ಗಾಜಿಗಾರ ಪಲ್ಕೆ ಅಂಗನವಾಡಿ ಕೇಂದ್ರ), ಜಯಶ್ರೀ (ಪುಚ್ಚಮೊಗರು ಕೇಂದ್ರ) ಹಾಗೂ ಬೊಗ್ರುಗುಡ್ಡೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೂಪಾ ಉಪಸ್ಥಿತರಿದ್ದರು.
ಬಚಾವೋ-ಭೇಟಿ ಬಡಾವೋದ ಲೋಗೋದ ಬಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಾದ ಶ್ರೇಯಾ ಶೆಟ್ಟಿ, ಹನೀಶಾ ಮತ್ತು ಶ್ರಾವ್ಯ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
ದ.ಕ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಮೂಡುಬಿದಿರೆ ಪೊಲೀಸ್ ಇಲಾಖೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.