Call Us Now: 08272 221717

‘ಲಾಕ್‍ಡೌನ್ ಲಹರಿ’ : ಆಳ್ವಾಸ್ ಸಂಗೀತ ತಂಡದಿಂದ ವಿನೂತನ ಪ್ರಯತ್ನ

June 13,2020

ಮೂಡುಬಿದಿರೆ: ಲಾಕ್‍ಡೌನ್ ಅನೇಕ ಯುವಪ್ರತಿಭೆಗಳನ್ನು ಹೊಸ ಪ್ರಯತ್ನಕ್ಕೆ ಪ್ರೇರೇಪಿಸುವತ್ತ ಸಫಲವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಲಾಕ್‍ಡೌನ್ ಲಹರಿ.

ಕೆಲವು ದಿನಗಳ ಹಿಂದೆ ಆಳ್ವಾಸ್‍ನ ಭರತನಾಟ್ಯ ವಿದ್ಯಾರ್ಥಿಗಳು ನೃತ್ಯಂಟೈನ್ ಎಂಬ ನೃತ್ಯ ರೂಪವನ್ನು ತಾವು ಇದ್ದ ಸ್ಥಳಗಳಿಂದಲೇ ವಿಡಿಯೋ ಮಾಡಿ ಜನರನ್ನು ರಂಜಿಸಿದ್ದರು. ನೃತ್ಯಂಟೈನ್‍ನಿಂದ ಸ್ಪೂರ್ತಿ ಪಡೆದ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡ ಯಕ್ಷಂಟೈನ್‍ನ ಪರದೆಯ ಮೇಲೆ ರಂಜಿಸಿತ್ತು. ಇವೆರಡರಿಂದ ಸ್ಪೂರ್ತಿ ಪಡೆದ ಆಳ್ವಾಸ್ ಸಂಗೀತ ತಂಡವು 5.19 ನಿಮಿಷದ ‘ಲಾಕ್‍ಡೌನ್ ಲಹರಿ’ ವಿಡಿಯೋವನ್ನು ಬಿಡುಗಡೆಗೊಳಿಸಿದೆ.
ಲಾಕ್‍ಡೌನ್ ಲಹರಿಯು ಕೃಷ್ಣರಾಜ್ ಭಟ್ ಸಾಹಿತ್ಯದಲ್ಲಿ, ಪ್ರವೀಣ್ ಡಿ ರಾವ್ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡನ್ನು ಮಯುರ್ ಅಂಬೆಕಲ್ಲು ಅವರ ನೇತೃತ್ವದಲ್ಲಿ ವಿಡಿಯೋ ರೂಪ ತಾಳಿದೆ.
ವರ್ಷಾ ಆಚಾರ್ಯ, ಮಯೂರ್ ಅಂಬೆಕಲ್ಲು, ಪವಿತ್ರ ಆಚಾರ್ಯ, ಸೌರವ್ ಪಾಪ್ತಿ, ಅನುಷ ಜಿ ಆಚಾರ್ಯ, ಮಾನಸ ಹೆಗ್ಡೆ, ಶ್ವೇತ ಎಸ್, ಭುಮಿಕಾ ನಾಯಕ್, ಮಧುಶ್ರಿ, ಮನೋಜ್, ನಿಕಿಲ್ ಪೈ, ಶೃತಿ ಪ್ರಭು ಸೇರಿ ಒಟ್ಟು ಹನ್ನೆರಡು ಜನ ಭಾಗವಹಿಸಿದ್ದಾರೆ. ಸುಪ್ರೀತ್ ಬಿಕೆ ವಿಡಿಯೋ ಎಡಿಟಿಂಗ್ ಮಾಡುವಲ್ಲಿ ಸಹಕರಿಸಿದ್ದಾರೆ.

ನೃತ್ಯ ಪ್ರಕಾರಗಳಿಗೆ ಹೋಲಿಸಿದರೆ ಸಂಗೀತವನ್ನು ಒಂದೇ ಪರದೆಯಲ್ಲಿ ತರುವುದು ತುಂಬಾ ಚಾಲೆಂಜಿಂಗ್ ಕೆಲಸ. ಆದರೂ ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಇಂತಹ ವಿಡಿಯೋ ಮಾಡುವ ಮೂಲಕ ಹೇರಳ ಅನುಭವ ಲಭಿಸಿತು ಎನ್ನುತ್ತಾರೆ ವಿಡಿಯೋದ ಹಿಂದಿನ ರೂವಾರಿ ಮಯೂರ್ ಅಂಬೆಕಲ್ಲು.