Call Us Now: 08272 221717

ಮೂಡುಬಿದಿರೆ ಕ್ರೀಡಾಭಿಮಾನಿಗಳಿಂದ ಲೋಕನಾಥ ಬೋಳಾರರಿಗೆ ಶ್ರದ್ಧಾಂಜಲಿ

October 15, 2020

ಮೂಡುಬಿದಿರೆ: ಇತ್ತೀಚೆಗೆ ನಿಧನರಾಗಿರುವ ಅವಿಭಜಿತ ದ.ಕ ಜಿಲ್ಲೆಯ ಹಿರಿಯ, ಅಂತರಾಷ್ಟ್ರೀಯ ಕ್ರೀಡಾಪಟು ಲೋಕನಾಥ ಬೋಳಾರ ಅವರಿಗೆ ಮೂಡುಬಿದಿರೆಯ ಕ್ರೀಡಾಭಿಮಾನಿಗಳ ಪರವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ, ಅಜಾನುಬಾಹು ವ್ಯಕ್ತಿತ್ವದ ಬೋಳಾರರು ಆಂತರ್ಯದಲ್ಲಿ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಅಪ್ರತಿಮ ಕ್ರೀಡಾ ಸಾಧನೆಯನ್ನು ಮೆರೆದ ಬೋಳಾರ್ ಅವರು ಹಿಂದೊಮ್ಮೆ ಮೂಡುಬಿದಿರೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಸೊಗಸಾದ ಆಟವನ್ನು ಆಡುವ ಮೂಲಕ ಮಂಗಳೂರು ತಂಡವು ಜಯಶಾಲಿಯಾಗಲು ಕಾರಣವಾಗಿತ್ತು ಎಂದು ವಿವವರಿಸಿದ ಅವರು ಬೋಳಾರರ ನಿಧನವು ಕ್ರೀಡಾ ಕ್ಷೇತ್ರಕ್ಕೆ ತುಂಬಾಲಾರದ ನಷ್ಟವೆಂದು ಬೋಳಾರರ ಕ್ರೀಡಾ ಪ್ರೇಮವನ್ನು ಸ್ಮರಿಸಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಮಾತನಾಡಿ ಪವರ್ ಲಿಫ್ಟಿಂಗ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ಹೀಗೆ ಕ್ರೀಡೆಯ ಎಲ್ಲಾ ವಿಭಾಗಗಳಲ್ಲೂ ಅದ್ವಿತೀಯ ಸಾಧನೆ ಮಾಡಿದ್ದು ಅವಿಭಜಿತ ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೂ ಸ್ಪೂರ್ತಿಯಾಗಿದ್ದರು ಎಂದು ಹೇಳಿದ ಅವರು ಏಕಲವ್ಯ ಕ್ರೀಡಾ ಸಂಸ್ಥೆಯನ್ನು ಮೂಡುಬಿದಿರೆಯಲ್ಲಿ ಸ್ಥಾಪಿಸುವಾಗ ಬೋಳಾರರು ನೀಡಿದ ಸಹಕಾರವನ್ನು ನೆನಪಿಸಿಕೊಂಡರು.
ಶ್ರದ್ಧಾಂಜಲಿ ಸಭೆಯಲ್ಲಿ ಲೋಕನಾಥ ಬೋಳಾರರ ಅಭಿಮಾನಿಗಳು, ಹಿತೈಷಿಗಳು, ಕ್ರೀಡಾಪಟುಗಳು ಮತ್ತು ಕ್ರೀಡಾಪ್ರೇಮಿಗಳು ಭಾಗವಹಿಸಿದ್ದರು. ಮೂಡುಬಿದಿರೆ ಕ್ರೀಡಾಭಿಮಾನಿಗಳಿಂದ ಲೋಕನಾಥ ಬೋಳಾರರಿಗೆ ಶ್ರದ್ಧಾಂಜಲಿ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಇತ್ತೀಚೆಗೆ ನಿಧನರಾಗಿರುವ ಅವಿಭಜಿತ ದ.ಕ ಜಿಲ್ಲೆಯ ಹಿರಿಯ, ಅಂತರಾಷ್ಟ್ರೀಯ ಕ್ರೀಡಾಪಟು ಲೋಕನಾಥ ಬೋಳಾರ ಅವರಿಗೆ ಮೂಡುಬಿದಿರೆಯ ಕ್ರೀಡಾಭಿಮಾನಿಗಳ ಪರವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ, ಅಜಾನುಬಾಹು ವ್ಯಕ್ತಿತ್ವದ ಬೋಳಾರರು ಆಂತರ್ಯದಲ್ಲಿ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಅಪ್ರತಿಮ ಕ್ರೀಡಾ ಸಾಧನೆಯನ್ನು ಮೆರೆದ ಬೋಳಾರ್ ಅವರು ಹಿಂದೊಮ್ಮೆ ಮೂಡುಬಿದಿರೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಸೊಗಸಾದ ಆಟವನ್ನು ಆಡುವ ಮೂಲಕ ಮಂಗಳೂರು ತಂಡವು ಜಯಶಾಲಿಯಾಗಲು ಕಾರಣವಾಗಿತ್ತು ಎಂದು ವಿವವರಿಸಿದ ಅವರು ಬೋಳಾರರ ನಿಧನವು ಕ್ರೀಡಾ ಕ್ಷೇತ್ರಕ್ಕೆ ತುಂಬಾಲಾರದ ನಷ್ಟವೆಂದು ಬೋಳಾರರ ಕ್ರೀಡಾ ಪ್ರೇಮವನ್ನು ಸ್ಮರಿಸಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಮಾತನಾಡಿ ಪವರ್ ಲಿಫ್ಟಿಂಗ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ಹೀಗೆ ಕ್ರೀಡೆಯ ಎಲ್ಲಾ ವಿಭಾಗಗಳಲ್ಲೂ ಅದ್ವಿತೀಯ ಸಾಧನೆ ಮಾಡಿದ್ದು ಅವಿಭಜಿತ ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೂ ಸ್ಪೂರ್ತಿಯಾಗಿದ್ದರು ಎಂದು ಹೇಳಿದ ಅವರು ಏಕಲವ್ಯ ಕ್ರೀಡಾ ಸಂಸ್ಥೆಯನ್ನು ಮೂಡುಬಿದಿರೆಯಲ್ಲಿ ಸ್ಥಾಪಿಸುವಾಗ ಬೋಳಾರರು ನೀಡಿದ ಸಹಕಾರವನ್ನು ನೆನಪಿಸಿಕೊಂಡರು.
ಶ್ರದ್ಧಾಂಜಲಿ ಸಭೆಯಲ್ಲಿ ಲೋಕನಾಥ ಬೋಳಾರರ ಅಭಿಮಾನಿಗಳು, ಹಿತೈಷಿಗಳು, ಕ್ರೀಡಾಪಟುಗಳು ಮತ್ತು ಕ್ರೀಡಾಪ್ರೇಮಿಗಳು ಭಾಗವಹಿಸಿದ್ದರು.