Call Us Now: 08272 221717

ಮಂಜಣ್ಣ ಸೇವಾ ಬ್ರಿಗೇಡ್‍ನಿಂದ ಕೇಮಾರಿನಲ್ಲಿ ಶ್ರಮದಾನ

June 22, 2020


ಮೂಡುಬಿದಿರೆ: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಮಂಗಳೂರು ಸದಸ್ಯರಿಂದ ಪಾಲಡ್ಕ ಪಂಚಾಯತ್ ವ್ಯಾಪ್ತಿಯ ಕೇಮಾರಿನಲ್ಲಿ ಗುರುವಾರ ಶ್ರಮದಾನ ನಡೆಸಲಾಯಿತು.


ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಅವರ ಮಾರ್ಗದರ್ಶನಲ್ಲಿ ಕೇಮಾರುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಶೀಲಾ-ದೂಜ ದಂಪತಿಯ ಮನೆ ನಿರ್ಮಾಣ ಕಾರ್ಯಕ್ಕೆ ಶ್ರಮದಾನ ಮಾಡುವ ಮೂಲಕ ಮಂಜಣ್ಣ ಸೇವಾ ಬ್ರಿಗೇಡ್ ಸದಸ್ಯರು ನೆರವಾದರು.


ಈ ಸಂದರ್ಭದಲ್ಲಿ ಬಜರಂಗದಳದ ಸುರತ್ಕಲ್ ಪ್ರಖಂಡ ಸಂಚಾಲಕ ಸುನೀಲ್ ತೋಕೂರು ಮಾತನಾಡಿ, ಮನೋಜ್ ಕೋಡಿಕೆರೆ ನೇತೃತ್ವದಲ್ಲಿ ಸ್ಥಾಪನೆಯಾದ ನಮ್ಮ ಸಂಘಟನೆ ಈವರೆಗೆ ಅನೇಕ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದು, ನಮ್ಮ ಜೊತೆ ಜನಪ್ರತಿನಿಧಿಗಳೂ ಜೊತೆಗೂಡಿ ಆಸಕ್ತ ಕುಟುಂಬಗಳಿಗೆ ನೆರವಾದರೆ ನಮ್ಮ ಪ್ರಯತ್ನ ಸಾರ್ಥಕವಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ರಿಗೇಡ್‍ನ ಪ್ರಧಾನ ಕಾರ್ಯದರ್ಶಿ ನಿತೇಶ್ ಸನಿಲ್, ಬಜ್ಪೆ ಬಿರುವೆರ್ ಕುಡ್ಲ ಘಟಕದ ಅಧ್ಯಕ್ಷ ಪ್ರಶಾಂತ್ ಕಾನ, ಬ್ರಿಗೇಡ್ ಗೌರವ ಸಲಹೆಗಾರ ನಾಗೇಶ್ ಶೆಟ್ಟಿ ತೋಕೂರು ಮತ್ತು ಸದಸ್ಯರು ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.