Call Us Now: 08272 221717

ಎಂಸಿಎಸ್ ಬ್ಯಾಂಕ್ ಕಲ್ಪವೃಕ್ಷ ಆರೋಗ್ಯ ನಿಧಿ: ಫಲಾನುಭವಿಗಳಿಗೆ ₹16.18 ಲಕ್ಷ ವಿತರಣೆ

July 29, 2020

ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ಎಂಸಿಎಸ್ ಬ್ಯಾಂಕ್ (ಮೂಡುಬಿದಿರೆ ಕೋ-ಆಪರೇಟೀವ್ ಸರ್ವಿಸ್ ಬ್ಯಾಂಕ್ ಲಿ.) ತನ್ನ ಸದಸ್ಯರ ಆರೋಗ್ಯ ಕಾಳಜಿಯ ದೃಷ್ಟಿಯಿಂದ ಆರೋಗ್ಯ ವಿಮಾ ಯೋಜನೆಯನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಿತ್ತು. ಕಲ್ಪವೃಕ್ಷ ಆರೋಗ್ಯ ವಿಮೆ ಎಂಬ ಹೆಸರಿನಡಿಯಲ್ಲಿ ಈ ಯೋಜನೆಯಂತೆ 2019-20 ನೇ ಸಾಲಿನಲ್ಲಿ 167 ಮಂದಿ ಸದಸ್ಯರಿಗೆ ಒಟ್ಟು ರೂ. 16,18,787 ಅನ್ನು ವಿತರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‍ ತಿಳಿಸಿದರು.

ಬ್ಯಾಂಕಿನ ನಿರ್ದೇಶಕರಾದ ಎಂ. ಗಣೇಶ್ ನಾಯಕ್, ಜೋರ್ಜ್ ಮೊನೀಸ್, ಎಂ. ಪದ್ಮನಾಭ, ಮನೋಜ್ ಕುಮಾರ್ ಶೆಟ್ಟಿ, ಸಿ.ಹೆಚ್.ಅಬ್ದುಲ್ ಗಫೂರ್, ಜ್ಞಾನೇಶ್ವರ್ ಪೈ, ಅಶೋಕ್ ಕಾಮತ್, ಬಿ. ವಿಮಲ್ ಕುಮಾರ್, ಜಯರಾಮ್ ಕೋಟ್ಯಾನ್, ದಯಾನಂದ ನಾಯ್ಕ್, ಪ್ರೇಮಾ ಸಾಲಿಯಾನ್, ಅನಿತಾ ಶೆಟ್ಟಿ ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.