Call Us Now: 08272 221717

ಮೂಡುಬಿದಿರೆ ತಾಲೂಕಿನ ಪ್ರಥಮ ಅಧ್ಯಕ್ಷರಾಗಿ ರೇಖಾ ಸಾಲ್ಯಾನ್, ಉಪಾಧ್ಯಕ್ಷರಾಗಿ ಸಂತೋಷ್ ಅಯ್ಕೆ

August 3, 2020

ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೂಡುಬಿದಿರೆ ತಾಲೂಕಿನ ಪ್ರಥಮ ಅಧ್ಯಕ್ಷರಾಗಿ ರೇಖಾ ಸಾಲ್ಯಾನ್ ಹಾಗೂ ಉಪಾಧ್ಯಕ್ಷರಾಗಿ ಸಂತೋಷ್ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮಂದಿ ಹಾಗೂ ಕಾಂಗ್ರೆಸ್‌ನ ಮೂರು ಮಂದಿ ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ನ ಸದಸ್ಯರೊಬ್ಬರು ಗೈರಾಗಿದ್ದು, ಬಿಜೆಪಿಗೆ ಸುಲಭದಲ್ಲಿ ಅಧ್ಯಕ್ಷ ಗಾದಿ ಸಿಕ್ಕಿದೆ.