Call Us Now: 08272 221717

ಮೂಡುಬಿದಿರೆ ಮೆಸ್ಕಾಂ ಎಇಇ ಸತೀಶ್ ಸೇವಾ ನಿವೃತ್ತಿ: ಬೀಳ್ಕೊಡುಗೆ

August 4, 2020

ಮೂಡುಬಿದಿರೆ : ಮೆಸ್ಕಾಂನ ವಿವಿಧ ಹುದ್ದೆಗಳಲ್ಲಿ ೩೪ ವರ್ಷ ಹಾಗೂ ಮೆಸ್ಕಾಂ ಮೂಡುಬಿದಿರೆ ಉಪವಿಭಾಗದಲ್ಲಿ ಎಇಇ ಆಗಿ 8 ವರ್ಷಗಳ ಸೇವೆ ಸಲ್ಲಿಸಿ ಜುಲೈ 31ರಂದು ವಯೋ ನಿವೃತ್ತರಾಗಿರುವ ಎಇಇ ಡಿ. ಆರ್. ಸತೀಶ್ ಅವರ ಬೀಳ್ಕೊಡುವ ಸಮಾರಂಭವು ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ಎಲ್ಲಾ ಸಿಬ್ಬಂದಿಗಳು ಮತ್ತು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮೂಡುಬಿದಿರೆ ವಲಯ ಸಂಯುಕ್ತ ಆಶ್ರಯದಲ್ಲಿ ಜರಗಿತು.

ಡಿ. ಆರ್. ಸತೀಶ್ ಮತ್ತು ಕೆ. ಪರಿಮಳ ದಂಪತಿಯನ್ನು ಸನ್ಮಾನಿಸಲಾಯಿತು. ಮೆಸ್ಕಾಂ ಸೂಪರಿಡೆಂಟ್ ಇಂಜಿನಿಯರ್ ಮಂಜಪ್ಪ, ಕಾವೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಮಂಗಳೂರು ಕೆ.ಪಿ.ಟಿ.ಸಿ.ಎಲ್.ನ ರವಿಕಾಂತ ಆರ್. ಕಾಮತ್, ಮೂಡುಬಿದಿರೆಯ ಶಾಖಾಧಿಕಾರಿ ಗುರುವ, ಕಲ್ಲಮುಂಡ್ಕೂರು ಶಾಖಾಧಿಕಾರಿ ಸುಭಾಸ್ ಆಚಾರ್, ಬೆಳುವಾಯಿ ಶಾಖಾಧಿಕಾರಿ ಅಮಿತ್ ರಾಶಿಂಕರ್, ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ರವಿಪ್ರಸಾದ್ ಕೆ. ಶೆಟ್ಟಿ, ಮೂಡುಬಿದಿರೆ ವಲಯಾಧ್ಯಕ್ಷ ಪ್ರಸಾದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.