Call Us Now: 08272 221717

ಅಕ್ಟೋಬರ್‌ವರೆಗೆ ಶಾಲೆ ಆರಂಭ ಬೇಡ: ಎಂ.ಕೆ ಶೆಟ್ಟಿ ಶಾಲೆ ಸಭೆಯಲ್ಲಿ ಪೋಷಕರ ಒತ್ತಾಯ

June 12, 2020

ಮೂಡುಬಿದಿರೆ:ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಲೆಗಳಲ್ಲಿ ಕೋವಿಡ್ ೧೯ ರ ಮಾರ್ಗಸೂಚಿಗಳನ್ನು ಪಾಲಿಸಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಅಕ್ಟೋಬರ್‌ವರೆಗೆ ಶಾಲೆ ಪುನರಾರಂಭಿಸುವುದು ಬೇಡ ಎಂದು ಪೋಷಕರು ಅಭಿಪ್ರಾಯಪಟ್ಟರು.
ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರ ಕಲ್ಲಬೆಟ್ಟುನ ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಪೋಷಕರ-ಶಿಕ್ಷಕರ ಸಭೆಯಲ್ಲಿ ಮೇಲಿನಂತೆ ಅಭಿಪ್ರಾಯ ಬಂತು ಮಳೆಗಾಲದಲ್ಲಿ ಮಕ್ಕಳಲ್ಲಿ ಸಹಜವಾಗಿ ನೆಗಡಿ, ಕೆಮ್ಮು, ಜ್ವರ ಬರುತ್ತದೆ. ಇನ್ನು ಕೊರೊನಾ ಕೂಡ ಈ ಅವಧಿಯಲ್ಲಿ ಉಲ್ಬಣವಾಗುವ ಅಪಾಯ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸುವುದು ಸುರಕ್ಷಿವಲ್ಲ. ಕೊರೊನಾ ಕಡಿಮೆಯಾದಲ್ಲಿ ನವೆಂಬರ್‌ನಿAದ ಶಾಲೆ ಆರಂಭಿಸಬಹುದು ಎಂದು ಸಲಹೆ ನೀಡಿದ ಪೋಷಕರು ಪ್ರಾಥಮಿಕ ಶಾಲೆ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕು ವಿರೋಧ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಪೋಷಕರ ಅಭಿಪ್ರಾಯವನ್ನು ದಾಖಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಲಾಗುವುದು. ಸರಕಾರದ ಆದೇಶ ಬಂದ ನಂತರವೇ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದರು.

ಈ ವರ್ಷ ಶಾಲಾ ಶುಲ್ಕದಲ್ಲಿ ಹೆಚ್ಚಳ ಇರುವುದಿಲ್ಲ ಎಂದು ಹೇಳಿದರು.

ಪ್ರಕಾಶ್ ಭಂಡಾರಿ, ಪ್ರಸನ್ನ ಹೆಗ್ಡೆ, ಸುರೇಶ್ ಅಂಚನ್, ನವೀನ್ ಸಾಲ್ಯಾನ್ ಪೋಷಕರ ಪರವಾಗಿ ಮಾತನಾಡಿದರು.

ಪ್ರಾಂಶುಪಾಲೆ ನಿಶ್ಮಿತ, ಪೋಷಕರ ಶಿಕ್ಷಕರ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಕರ‍್ಯದರ್ಶಿ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.