Call Us Now: 08272 221717

ಮೂಡುಮಾರ್ನಾಡಿನಲ್ಲಿ ಬಾಲಕಿ ಆತ್ಮಹತ್ಯೆ

October 8, 2020

ಮೂಡುಬಿದಿರೆ: ಮಕ್ಕಳೊಂದಿಗೆ ಜಗಳಾಡುತ್ತಿದ್ದುದಕ್ಕೆ ಬುದ್ದಿ ಹೇಳಿದ್ದರಿಂದ ಸಿಟ್ಟಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ಗುರುವಾರ ನಡೆದಿದೆ. ಸ್ಥಳೀಯ ಕರುಣಾಕರ ಸುಶೀಲಾ ದಂಪತಿಯ ಪುತ್ರಿ ಪೂಜಾ (13ವರ್ಷ) ಆತ್ಮಹತ್ಯೆ ಮಾಡಿಕೊಂಡಾಕೆ.

ಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಅವರಿಗೆ ಹೊಡೆದು ತೊಂದರೆ ಮಾಡಿದ್ದ ಪೂಜಾಳಿಗೆ ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಹಿರಿಯಕ್ಕ ಸುಚಿತ್ರಾ ಬುದ್ಧಿ ಮಾತು ಹೇಳಿದ್ದರಿಂದ ಖಿನ್ನತೆಗೆ ಒಳಗಾದ ಪೂಜಾ ಮನೆ ಬಳಿ ಇರುವ ಹಾಡಿಯಲ್ಲಿ ಮರದ ಕೊಂಬೆಗೆ ಚೂಡಿದಾರ ಶಾಲ್‍ನಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.