Call Us Now: 08272 221717

ಮೂಡುಬಿದಿರೆ ಕಾಳಿಕಾಂಬ ದೇವಸ್ಥಾನಕ್ಕೆ ಮೂಡುವೇಣುಪುರದೊಡೆಯ ಕೃತಿ ಸಮರ್ಪಣೆ

August 4, 2020

ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಉತ್ಸವದ ಉಲ್ಲೇಖವಿರುವ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ಚರಿತ್ರೆ, ಧಾರ್ಮಿಕ ಪರಂಪರೆ ಸಹಿತ ಮಹತ್ವದ ದಾಖಲೆಗಳನ್ನೊಳಗೊಂಡಿರುವ `ಮೂಡುವೇಣುಪುರದೊಡೆಯ’ ಕೃತಿಯ ಪ್ರತಿಯನ್ನು ಲೇಖಕ ಎಂ. ಗಣೇಶ್ ಕಾಮತ್ ಅವರು ಶ್ರೀ ಕಾಳಿಕಾಂಬಾ ದೇವರ ಸನ್ನಿಧಿಗೆ ಭಾನುವಾರ ಶ್ರಾವಣ ಮಾಸದ ವಿಶೇಷ ಪುಷ್ಪಪೂಜಾ ಸಂದರ್ಭ ಆಡಳಿತ ಮೊಕ್ತೇಸರ, ಪುರೋಹಿತ ಎನ್. ಜಯಕರ ಆಚಾರ್ಯ ಅವರ ಮೂಲಕ ಮೂಲಕ ಸಮರ್ಪಿಸಿದರು.

ಶ್ರೀ ಕ್ಷೇತ್ರದ ತಂತ್ರಿವರ್ಯ ಎನ್. ಕೇಶವ ಪುರೋಹಿತರು ಗಣೇಶ್ ಕಾಮತ್ ಅವರಿಗೆ ಕ್ಷೇತ್ರದ ಪರವಾಗಿ ಶಾಲು ಹೊದೆಸಿ, ಪ್ರಸಾದ ನೀಡಿ ಗೌರವಿಸಿ ಹರಸಿದರು. ಕೃತಿಗೆ ಬೆನ್ನುಡಿ ಬರೆದಿರುವ ಧನಂಜಯ ಮೂಡುಬಿದಿರೆ,ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಕೋಶಾಧಿಕಾರಿ ಚಂದಿತ್ಲು ಗುರುದತ್ತ ಅಚಾರ್ಯ ಉಪಸ್ಥಿತರಿದ್ದರು.