Call Us Now: 08272 221717

ಮೂಡುಬಿದಿರೆ ಅಲಂಗಾರಿನ ಯುವತಿ ನಾಪತ್ತೆ

July 21, 2020

ಮೂಡುಬಿದಿರೆ:ಅಲಂಗಾರು ಆಶ್ರಯ ಕಾಲನಿಯ ಯುವತಿಯೊಬ್ಬಳು ಕಾಣೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

ಅಬ್ದುಲ್ ರಶೀದ್ ಅವರ ಪುತ್ರಿ 18 ವರ್ಷ ಪ್ರಾಯದ ಯುವತಿ ಬುಧವಾರ ಬೆಳಿಗ್ಗೆ ಮನೆಯಲ್ಲಿ ಬ್ಯಾಗ್‌ಗೆ ಬಟ್ಟೆ ಪ್ಯಾಕ್ ಮಾಡುತ್ತಿದ್ದಳೆನ್ನಲಾಗಿದೆ. ಮನೆಯವರು ಈ ಬಗ್ಗೆ ಕೇಳಿದಾಗ ಒರಟಾಗಿ ಉತ್ತರಿಸಿ ಸ್ವಲ್ಪ ಹೊತ್ತಿನ ಬಳಿಕ ಮನೆ ಬಿಟ್ಟು ಹೋದಳೆನ್ನಲಾಗಿದೆ. ಮನೆಯವರು ಹುಡುಕಾಡಿ ಯುವತಿ ಸಿಗದಿದ್ದಾಗ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.