Call Us Now: 08272 221717

ನೀರ್ಕೆರೆ ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಅಭಿಯಾನ

September 10, 2020

ಮೂಡುಬಿದಿರೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸೋಕ್ ಪಿಟ್, ಪೌಷ್ಠಿಕ ತೋಟ ಮತ್ತು ಅಣಬೆ ಬೇಸಾಯ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರ್ಕೆರೆ ಅಂಗನವಾಡಿ ಕೇದ್ರದಲ್ಲಿ ಚಾಲನೆ ನೀಡಲಾಯಿತು.

ಮೂಡುಬಿದಿರೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ದಯಾವತಿ ಎಮ್ ಪೌಷ್ಠಿಕಾಂಶಯುಕ್ತ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ತೆಂಕಮಿಜಾರು ಗ್ರಾ.ಪಂನ ಪಿಡಿಒ ಎನ್ ಭಾಗ್ಯಲಕ್ಷ್ಮೀ , ಪಂಚಾಯತ್ ಸಿಬಂದಿಗಳಾದ ರಾಕೇಶ್, ಸತೀಶ್, ಮಂಜಪ್ಪ ಉಪಸ್ಥಿತರಿದ್ದರು. ಕಿನ್ನಿಗೋಳಿ ಪ್ರಜ್ಞಾ ಸಲಹಾ ಕೇಂದ್ರದ ಸದಸ್ಯರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.