Call Us Now: 08272 221717

ನಿಡ್ಡೋಡಿ, ನೀರುಡೆಯ 14 ಕೆಂಪು ಕಲ್ಲುಕೋರೆಗಳಿಗೆ ಲೋಕಾಯುಕ್ತ ದಾಳಿ

June 18, 2020

ಮೂಡುಬಿದಿರೆ:ನಿಡ್ಡೋಡಿ ಹಾಗೂ ನೀರುಡೆ ಪರಿಸರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ 14 ಕೆಂಪು ಕಲ್ಲುಕೋರೆಗಳಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ದಿನವಿಡೀ ಪರಿಶೀಲನೆ ನಡೆಸಿದ್ದಾರೆ.

ನಿಡ್ಡೋಡಿ ಪರಿಸರದಲ್ಲಿ ಕೆಲವು ವರ್ಷಗಳಿಂದ ಕಾನೂನುಬಾಹಿರವಾಗಿ ಕೆಂಪು ಕಲ್ಲು ಕೋರೆಗಳಿಂದ ಕಲ್ಲುಗಳನ್ನು ತೆಗೆಯಲಾಗುತ್ತಿತ್ತು. ಇದರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಸೇರಿಕೊಂಡಿದ್ದವು. ಈ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್‍ಸ್ಪೆಕ್ಟರ್ ಭಾರತಿ, ಎಎಸ್‍ಐ ವೇಣುಗೋಪಾಲ ಸಿಬಂದಿಗಳಾದ ಸುರೇಂದ್ರ ಹಾಗೂ ಪ್ರದೀಪ್ ದಾಳಿ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 14 ಕಲ್ಲುಕೋರೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ನೀರುಡೆ ಪರಿಸರದ ಕಲ್ಲುಕೋರೆಗೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಹಾಗೂ ಮೂಡುಬಿದಿರೆ ತಹಶಿಲ್ದಾರ್ ಜಂಟಿ ದಾಳಿ ನಡೆಸಿದ್ದರು. ಆದರೆ ಪರಿಸರದಲ್ಲಿದ್ದ ಇನ್ನೂ ಅನೇಕ ಅಕ್ರಮ ಕಲ್ಲು ಕೋರೆಗಳ ಬಗ್ಗೆ ಈ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸ್ಥಳೀಯರಿಗೆ ಅಸಮಧಾನವಿತ್ತೆನ್ನಲಾಗಿದೆ.