Call Us Now: 08272 221717

OPPO ಮೊಬೈಲ್ ಕಂಪೆನಿಯ ಆರು ಕಾರ್ಮಿಕರಿಗೆ ಕೊರೊನಾ ಪಾಸಿಟಿವ್: ನೊಯ್ಡಾ ಘಟಕ ತಾತ್ಕಾಲಿಕ ಸ್ಥಗಿತ

May 18, 2020

ಚೀನಾ‌ ಮೂಲದ ಮೊಬೈಲ್ ತಯಾರಿಕ ಕಂಪೆನಿಯ ನೊಯ್ಡಾ( ಉತ್ತರ ಪ್ರದೇಶ) ಘಟಕದಲ್ಲಿ ಮೂರು ಸಾವಿರ ಮಂದಿ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಆರು ಮಂದಿ ಕಾರ್ಮಿಕರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಉಳಿದ ಕಾರ್ಮಿಕರರ ವರದಿ ಬಂದ ಬಳಿಕ ಘಟಕವು ಕಾರ್ಯಾಚರಿಸಲಿದ್ದು, ಕೊರೊನಾ ನೆಗೆಟಿವ್ ಇರುವವರು ಕೆಲಸ ಮುಂದುವರಿಸಲಿದ್ದಾರೆ. ಕಾರ್ಮಿಕರ ಸುರಕ್ಷತೆಗೆ ಆಧ್ಯತೆ ನೀಡಿ, ಕೊರೊನಾ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪೆನಿ ತಿಳಿಸಿದೆ.