Call Us Now: 08272 221717

ಪಾಲಡ್ಕದಲ್ಲಿ ಗೇರು ಕೃಷಿ ಮಾಹಿತಿ

September 10, 2020

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಡುಬಿದಿರೆ ಇದರ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಆಲಂಗಾರು ವಲಯ, ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಕೃಷಿ ಇಲಾಖೆಯ ಆಶ್ರಯದಲ್ಲಿ ಪಾಲಡ್ಕ ಸುಕೇಶ್ ಅವರ ಮನೆಯ ಕೃಷಿ ತೋಟದಲ್ಲಿ ಗೇರು ಕೃಷಿ ಮಾಹಿತಿ, ಇಂಗು ಗುಂಡಿ ಪ್ರಾತ್ಯಕ್ಷಿಕೆ -ಮಾಹಿತಿ, ಬೆಳೆ ವಿಮೆ ಆ್ಯಪ್ ಮತ್ತು ಮಣ್ಣಿನ ಗುಣಮಟ್ಟದ ಬಗ್ಗೆ ಹಾಗೂ ಸ್ವ ಉದ್ಯೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಾ ಬರುತ್ತಿದೆ ಈ ನಿಟ್ಟಿನಲ್ಲಿ ಯುವಕರು ಕೃಷಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ಗಣೇಶ್ ಬಿ., ಹಡಿಲು ಬಿಟ್ಟಿರುವ ಭೂಮಿಯನ್ನು ಪುನಶ್ಚೇತನ ಮಾಡುವ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಿ 750 ಎಕ್ರೆ ಪ್ರದೇಶದಲ್ಲಿ ಯಂತ್ರಶ್ರೀ ಮೂಲಕ ಭತ್ತ ನಾಟಿ ಮಾಡಲಾಗಿದೆ ಎಂದು ತಿಳಿಸಿದರು. ಕೃಷಿ ಅಧಿಕಾರಿ ಕುಲಕರ್ಣಿ ಅವರು ಗೇರು ನಾಟಿ & ಗೇರುಗೆ ಬರುವ ರೋಗಗಳನ್ನು ತಡೆಗಟ್ಟುವ ವಿಧಾನ ಬಗ್ಗೆ, ತೆಂಗು, ಇಂಗು ಗುಂಡಿ ನೀರನ್ನು ಇಂಗಿಸುವ ವಿಧಾನದ ಬಗ್ಗೆ, ಪ್ರಿಯಾಂಕ ಅವರು ಬ್ರೊಡೊ ದ್ರಾವಣದ ತಯಾರಿ ಹಾಗೂ ಬಳಕೆ, ಸಮಗ್ರ ಕೃಷಿ, ಸಂಜು ಅವರು ಬೆಳೆ ವಿಮೆ ಆ್ಯಪ್ ಬಳಕೆ ಮತ್ತು ಉಪಯೋಗದ ಬಗ್ಗೆ, ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಅವರು ಅರಣ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷೆ ಶಾರದಾ, ಕಡಂದಲೆ ಒಕ್ಕೂಟದ ಅಧ್ಯಕ್ಷ ಜಗದೀಶ್ ಕೋಟ್ಯಾನ್, ಮೇಲ್ವೀಚಾರಕ ಗಿರೀಶ್, ಸೇವಾ ಪ್ರತಿನಿಧಿ ಶಾರದಾ, ವಸಂತಿ, ಕೃಷಿಕ, ಅರ್ಚಕರಾದ ಅನಂತ ಕೃಷ್ಣಭಟ್, ಪ್ರಗತಿಪರ ಕೃಷಿಕ ಸುಕೇಶ್ ಶೆಡ್ಯ ಉಪಸ್ಥಿತರಿದ್ದರು